Monday, May 6, 2024

ಪಾಕಿಸ್ತಾನಕ್ಕೆ ಹೀನಾಯ ಸೋಲು : 93 ರನ್​ಗಳಿಂದ ಗೆದ್ದು ಬೀಗಿದ ಇಂಗ್ಲೆಂಡ್

ಬೆಂಗಳೂರು : ವಿಶ್ವಕಪ್​ನ 44ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿತು. ಈಗಾಗಲೇ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದ ಪಾಕ್​ಗೆ ಈ ಸೋಲು ಮತ್ತೊಂದು ಆಘಾತ ನೀಡಿತು.

ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 93 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ಸ್​ ಇಂಗ್ಲೆಂಡ್ ವಿಶ್ವಕಪ್-2023​ ಅಭಿಯಾನವನ್ನು ಅಂತ್ಯಗೊಳಿಸಿತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡು 337 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್​ (84), ಜೋ ರೂಟ್ (60) ಹಾಗೂ ಜಾನಿ ಬೈರ್​ಸ್ಟೋವ್ (59) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು.

ಇಂಗ್ಲೆಂಡ್ ನೀಡಿದ್ದ 338 ರನ್​ಗಳ ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇಂಗ್ಲೆಂಡ್ ಬೌಲರ್​ಗಳ ಶಿಸ್ತುಬದ್ಧ ದಾಳಿಗೆ ಪಾಕ್​ ಬ್ಯಾಟರ್​ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಪರಿಣಾಮ 43.3 ಓವರ್​ಗಳಲ್ಲಿ 244 ರನ್​ಗಳಿಗೆ ಪಾಕಿಸ್ತಾನ ತಂಡ ಸರ್ವಪತನ ಕಂಡಿತು. ಪಾಕ್ ಪರ ಆಘಾ ಸಲ್ಮಾನ್ 51, ಬಾಬರ್ ಅಜಂ 38, ರಿಜ್ವಾನ್ 36, ಶಕೀಲ್ 29 ರನ್​ ಗಲಿಸಿದರು. ಇಂಗ್ಲೆಂಡ್ ಪರ ವಿಲ್ಲೆ 3, ಆದಿಲ್ 2, ಅಟ್ಕಿನ್ಸನ್ 2 ಹಾಗೂ ಮಯಿನ್ ಅಲಿ 2 ವಿಕೆಟ್ ಕಬಳಿಸಿ ಮಿಂಚಿದರು.

RELATED ARTICLES

Related Articles

TRENDING ARTICLES