ಬೆಂಗಳೂರು : ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ಗಳ ಜಯ ದಾಖಲಿಸಿತು. ಈ ಸೋಲಿನೊಂದಿಗೆ ಅಫ್ಘಾನಿಸ್ತಾನದ ಸೆಮಿಫೈನಲ್ ಕನಸು ಕಮರಿತು.
ಅಫ್ಘಾನಿಸ್ತಾನ ನೀಡಿದ್ದ 245 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಅಫ್ಘಾನ್ ಬೌಲರ್ಗಳು ಕೊಂಚ ಕಾಡಿದರು. ಬಳಿಕ, ಡಿ ಕಾಕ್ ಹಾಗೂ ಡಸ್ಸೆನ್ ಸಮಯೋಚಿತ ಆಟ ಪ್ರದರ್ಶಿಸಿದರು. ಪರಿಣಾಮ 47.3 ಓವರ್ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿತು.
ದಕ್ಷಿಣ ಆಫ್ರಿಕಾ ಪರ ಡಿ ಕಾಕ್ 41, ನಾಯಕ ಬವುಮಾ 23, ಮಕ್ರಾಮ್ 25, ಕ್ಲಾಸೆನ್ 10, ಡೇವಿಡ್ ಮಿಲ್ಲರ್ 24, ಡಸ್ಸೆನ್ ಅಜೇಯ 76 ಹಾಗೂ ಆಂಡಿಲ್ ಫೆಹ್ಲುಕ್ವಾಯೊ ಅಜೇಯ 39 ರನ್ ಗಳಿಸಿದರು. ಅಫ್ಘಾನ್ ಬೌಲರ್ಗಳ ಪೈಕಿ ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್, ರೆಹಮಾನ್ ಒಂದು ವಿಕೆಟ್ ಪಡೆದರು.
ಇನ್ನೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾ ನಿಗದಿತ 50 ಓವರ್ಗಳಲ್ಲಿ 244 ರನ್ ಗಳಿಸಿ ಆಲೌಟ್ ಆಯಿತು. ಅಫ್ಘಾನ್ ಪರ ಅಝ್ಮತುಲ್ಲಾ ಮಿರ್ಜಾ ಅಜೇಯ 97 ರನ್ ಗಳಿಸಿ ಮೀಂಚಿದರು. ರಹಮತ್ ಶಾ 26, ನೂರ್ ಅಹಮದ್ 26, ಗುರ್ಬಾಜ್ 25 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಟಿ 4, ಕೇಶವ್ ಮಹಾರಾಜ್ ಹಾಗೂ ಲುಂಗಿ 2 ವಿಕೆಟ್ ಕಬಳಿಸಿದರು. ಈ ಸೋಲಿನೊಂದಿಗೆ ಅಫ್ಘಾನಿಸ್ತಾನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.
A fantastic 76* helps Rassie van der Dussen win the @aramco #POTM 👌#CWC23 | #SAvAFG pic.twitter.com/84Z1gAGcB5
— ICC Cricket World Cup (@cricketworldcup) November 10, 2023