Monday, December 23, 2024

ಜನರಿಗೆ ಗ್ಯಾಂರಟಿ ಎಂಬ ಬಿಸ್ಕೆಟ್ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ : ಬಿ.ವೈ ರಾಘವೇಂದ್ರ ಕಿಡಿ

ಉತ್ತರ ಕನ್ನಡ : ರಾಜ್ಯದ ಸಾರ್ವಜನಿಕರಿಗೆ (ಜನರಿಗೆ) ಉಚಿತ ಗ್ಯಾಂರಟಿ ಎಂಬ ಬಿಸ್ಕೆಟ್ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಜನರಿಗೇ ಅನ್ನಿಸಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪು‌ಮಾಡಿದ್ದೇವೆ ಅಂತ ಎಂದು ಕುಟುಕಿದ್ದಾರೆ.

ಅನೇಕ ವರ್ಷಗಳ ನಂತರ ರಾಜ್ಯಕ್ಕೆ ಬಹಳ ಕೆಟ್ಟ ಪರಿಸ್ಥಿತಿ‌ ಬಂದಿದೆ. ಮದ್ಯದ ಬೆಲೆ ಏರಿಸಿ ಆ ಹಣದಲ್ಲೇ ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ 2,000 ರೂಪಾಯಿ ನೀಡುತ್ತಿದ್ದಾರೆ. ಸಮರ್ಥ ಅಧಿಕಾರ ನಡೆಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ‌. ರೈತರ, ಬಡವರ ಅಭಿವೃದ್ಧಿಗೆ ಪೂರಕ ಯೋಜನೆ ನೀಡದೇ ಸಮಯ ವ್ಯರ್ಥದ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ದೀಪಾವಳಿ ಸಂತೋಷ ಕಸಿದಿದೆ

ಸಿಎಂ ಸಿದ್ದರಾಮಯ್ಯ ಕೇವಲ ಪ್ರಧಾನಿ ಮೋದಿ ಹಾಗೂ ಸಂಸದರನ್ನು ದೂರುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯ ಬರದಿಂದ ತತ್ತರಿಸಿ ಹೋಗಿದೆ. ಕಾಂಗ್ರೆಸ್​ ಸರ್ಕಾರ ಮಾತ್ರ ಗಂಭೀರವಾಗಿ ತೆಗೆದುಕೊಂಡಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ್ರು ರಾಜ್ಯದ ಜನತೆ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಭಾಷಣ ಮಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಬಡವರ ದೀಪಾವಳಿ ಸಂತೋಷವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಬಿ.ವೈ. ರಾಘವೇಂದ್ರ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES