ಬೆಂಗಳೂರು : KEA ಪರೀಕ್ಷೆಯ ಕಿಂಗ್‌ಪಿನ್ RD ಪಾಟೀಲ್‌ನನ್ನು ಬಂಧನ ಮಾಡಲಾಗಿದೆ. ಕಳೆದ 12 ದಿನಗಳಿಂದ ತಲೆ ಮರೆಸಿಕೊಂಡಿದ್ದ KEA ಪರೀಕ್ಷಾ ಹಗರಣದ ಆರೋಪಿ ಆರ್.ಡಿ ಪಾಟೀಲ್, ಮಹಾರಾಷ್ಟ್ರದಲ್ಲಿ ಅಂದರ್ ಆಗಿದ್ದಾನೆ.
ಆರೋಪಿಯನ್ನು ಬಂಧಿಸಿ ಕಲಬುರಗಿಗೆ ಕರೆತರಲಾಗಿದೆ ಎಂದು ಕಲಬುರಗಿ ಪೊಲೀಸ್ ಮೂಲಗಳು ತಿಳಿಸಿವೆ. ನವೆಂಬರ್ 6ರಂದು ವರದಾ ಅಪಾರ್ಟ್‌ನಿಂದ ಕಾಂಪೌಂಡ್ ಗೋಡೆ ಕುಸಿದು R.D.ಪಾಟೀಲ್ ಎಸ್ಕೇಪ್ ಆಗಿದ್ದ. ಈ ಬಗ್ಗೆ ಪೊಲೀಸರು ವಿವಿಧ ತಂಡಗಳಲ್ಲಿ ಆರೋಪಿಗಾಗಿ ಬಲೆ ಬೀಸಿದ್ದರು.
ಕೆಇಎ ಎಫ್‌ಡಿಎ ಪರೀಕ್ಷಾ ಹಗರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ತಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಸ್ಪೋಟಕ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಪಾಟೀಲ್‌ಗೆ ಫ್ಲ್ಯಾಟ್ ನೀಡಿದ್ದ ಹಿನ್ನಲೆಯಲ್ಲಿ ಅಪಾರ್ಟ್ಮೆಂಟ್‌ನ ಮಾಲೀಕ ಮತ್ತು ಮ್ಯಾನೇಜರ್‌ನನ್ನ ಅರೆಸ್ಟ್ ಮಾಡಲಾಗಿದೆ.
ಮಾಲೀಕ ಮತ್ತು ಮ್ಯಾನೇಜರ್ ಬಂಧನ
ಆರ್.ಡಿ ಪಾಟೀಲ್ ಪೊಲೀಸರ ದಾಳಿ ವೇಳೆ ತಪ್ಪಿಸಿಕೊಳ್ಳಲು ಈತನಿಗೆ ರಕ್ಷಣೆ ನೀಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆರ್.ಡಿ ಪಾಟೀಲ್‌ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಶಹಾಪೂರದ ಶಂಕರ್ ಗೌಡಯಾಳವಾರ್ ಮತ್ತು ಅಪಾರ್ಟ್ ಮೆಂಟ್ ವ್ಯವಸ್ಥಾಪಕ ದಿಲೀಪ್ ಪವಾರ್ ಬಂಧಿತರಾಗಿದ್ದಾರೆ. ಆರ್.ಡಿ ಪಾಟೀಲ್ನಿಂದ ವ್ಯವಸ್ಥಾಪಕ ದಿಲೀಪ್ 10 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದು, ಆ ಹಣ ಫ್ಲ್ಯಾಟ್ ಮಾಲೀಕ ಶಂಕರ್ ಗೌಡಗೆ ಕೊಟ್ಟಿದ್ದರು ಎನ್ನಲಾಗಿದೆ.