Monday, December 23, 2024

ರಚಿನ್​ ರವೀಂದ್ರ ಗೆ ದೃಷ್ಟಿ ತೆಗೆದ ಅಜ್ಜಿ: ವೀಡಿಯೋ ವೈರಲ್​!

ಬೆಂಗಳೂರು: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್​ ಪರ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವ ಯುವ ಬ್ಯಾಟ್ಸ್​ಮೆನ್ ರಚಿನ್​ ರವೀಂದ್ರ ಬೆಂಗಳೂರಿನಲ್ಲಿರುವ ಅವರ ಅಜ್ಜಿ ಮನೆಗೂ ಭೇಟಿ ನೀಡಿದ್ದು, ಈ ವೇಳೆ ಅವರ ಅಜ್ಜಿ ದೃಷ್ಟಿ ತೆಗೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇತ್ತೀಚೆಗೆ ರಚಿನ್ ರವೀಂದ್ರ ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಜ್ಜಿ ರಚಿನ್ ರನ್ನು ಕೂರಿಸಿ ದೃಷ್ಟಿ ತೆಗೆದಿದ್ದಾರೆ. ಈ ವೇಳೆ ರಚಿನ್ ಕೂಡ ಅಜ್ಜಿ ಮಾತಿಗೆ ಎದುರಾಡದೇ ಸುಮ್ಮನೇ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ವೀಡಿಯೋವನ್ನು ರಚಿನ್ ರವೀಂದ್ರ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:  ಮಂಡ್ಯದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್!

ವಿಶ್ವಕಪ್ 2023 ರಲ್ಲಿ ನ್ಯೂಜಿಲೆಂಡ್ ಪರ ಆಡುತ್ತಿರುವ ರಚಿನ್ ರವೀಂದ್ರ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಇವರು ಮೂಲತಃ ಭಾರತದವರು, ಅದರಲ್ಲೂ ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ. ರಚಿನ್ ಅವರು ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ​ ​ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಜಿಲೆಂಡ್​​ಗೆ ತೆರಳಿದ್ದರು. ಆ ಬಳಿಕ ಅಲ್ಲಿಯೇ ನೆಲೆಸಿದ್ದರು.

RELATED ARTICLES

Related Articles

TRENDING ARTICLES