Monday, December 23, 2024

ಶ್ರೀಲಂಕಾ ಆಲೌಟ್ : ಕಿವೀಸ್​ಗೆ 172 ರನ್​ಗಳ ಸುಲಭ ಟಾರ್ಗೆಟ್

ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಲಂಕಾ 171 ರನ್​ಗಳಿಗೆ ಆಲೌಟ್​ ಆಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕಿವೀಸ್ ಬೌಲರ್​ಗಳ ದಾಳಿಗೆ ದಹನವಾಯಿತು. 46.4 ಓವರ್​ಗಳಲ್ಲಿ 171 ರನ್​ ಗಳಿಸಿ ಸರ್ವಪತನ ಕಂಡಿತು.

ಶ್ರೀಲಂಕಾ ಪರ ಕುಸಾಲ್ ಪೆರೇರಾ 51 (ಅರ್ಧಶತಕ) ಹಾಗೂ ಮಹೀತ್ ತೀಕ್ಷಣ 39 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳು ರನ್​ ಗಳಿಸುವಲ್ಲಿ ವಿಫಲರಾದರು. ಪಾತುಮ್ ನಿಸ್ಸಾಂಕ 2, ಕುಸಾಲ್ ಮೆಂಡಿಸ್ 6, ಸದೀರ ಸಮರವಿಕ್ರಮ 1, ಚರಿತ್ ಅಸಲಂಕಾ 8, ಧನಂಜಯ ಡಿ ಸಿಲ್ವಾ 19 ಹಾಗೂ ಏಂಜೆಲೊ ಮ್ಯಾಥ್ಯೂಸ್ 16 ರನ್​ ಗಳಿಸಿದರು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3, ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ ತಲಾ 2, ಟಿಮ್ ಸೌಥಿ 1 ವಿಕೆಟ್ ಪಡೆದರು.

ಶ್ರೀಲಂಕಾ ತಂಡ

ಕುಸಾಲ್ ಮೆಂಡಿಸ್ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ

ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್

RELATED ARTICLES

Related Articles

TRENDING ARTICLES