Wednesday, January 22, 2025

BBKS10: ರೊಚ್ಚಿಗೆದ್ದು ಬಯ್ಯುವ ಟಾಸ್ಕ್‌ : ಸಂಗೀತಾ-ಕಾರ್ತಿಕ್ ವ್ಯಕ್ತಿತ್ವ ಮಾತಿನಲ್ಲೇ ಚಿಂದಿ

ಬೆಂಗಳೂರು: ದೊಡ್ಮನೆ ಬಿಗ್‌ಬಾಸ್‌ ಮನೆಯ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ದಿನಕಳೆದಂತೆ ಸ್ನೇಹಗಳು, ಸಂಬಂಧಗಳೆಲ್ಲ ಮೆಲ್ಲಗೆ ಹಿನ್ನೆಲೆಗೆ ಸರಿದು ಸ್ಪರ್ಧಿಗಳ ಅಸಲಿ ಬಣ್ಣ ಹೊರಬರುತ್ತಿದೆ.

ಹಾಗಾದರೆ ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ನಡೆಯುತ್ತಿದೆ ಎಂಬುವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಹೊಸ ಹೊಸ ರೀತಿಯ ಟಾಸ್ಕ್‌ಗಳ ಮೂಲಕ ವೀಕ್ಷಕರ ಎದುರು ಹಾಜರಾಗುತ್ತಿರುವ ಬಿಗ್‌ಬಾಸ್‌ ಸ್ಪರ್ಧಿಗಳು , ಮಾತಿನ ಹಿಡಿತ, ಬಳಸುವ ಪದಗಳ ಬಗ್ಗೆ ಹೆಚ್ಚು ಗಮನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಇದೀಗ ಸಂಗೀತಾ ಮತ್ತು ಕಾರ್ತಿಕ್​ ವಿರುದ್ಧ ಮನೆಮಂದಿ ರೊಚ್ಚಿಗೆದ್ದಿದ್ದು, ವ್ಯಕ್ತಿತ್ವವನ್ನು ಮಾತಿನಲ್ಲೇ ಚಿಂದಿ ಮಾಡಿದ್ದಾರೆ.

ಅವರು ಒಂದೊಂದು ಚೇರ್‍ನಲ್ಲಿ ಕೂತಿದ್ದಾರೆ. ಮನೆಯ ಉಳಿದ ಸ್ಪರ್ಧಿಗಳೆಲ್ಲ ಅವರ ಎದುರಿಗೆ ಬಂದು ಅವರನ್ನು ಹೀನಾಮಾನವಾಗಿ ಬೈಯುತ್ತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ, ಅವರು ಹಿಂದೆ ಆಡಿದ ಮಾತುಗಳ ಬಗ್ಗೆಯೆಲ್ಲ ಹೇಳಿ ಕೆಣಕುತ್ತಿದ್ದಾರೆ.

ಆದರೂ ಸಂಗೀತಾ ಮತ್ತು ಕಾರ್ತಿಕ್ ಇಬ್ಬರೂ ತಲೆಬಗ್ಗಿಸಿ, ಒಂದೂ ಮಾತಾಡದೆ ಕೂತಿದ್ದಾರೆ.
ತಲೆತಗ್ಗಿಸಿ ಕೂತಿದ್ದ ಕಾರ್ತಿಕ್ ಬಳಿಗೆ ಬಂದು ವಿನಯ್, ‘ಫ್ರೆಂಡಾ ನೀನು? ಒಬ್ಬ ಒಂಟಿ ಮನುಷ್ಯನಾಗೇ ಉಳಿಯೋದು ನಿನ್ ಜೀವನದಲ್ಲಿ’ ಎಂದು ಗುಡುಗಿದ್ದಾರೆ.

ಸಂಗೀತಾ ಎದುರಿಗೆ ನಿಂತ ನಮ್ರತಾ, ‘ಯಾವೊಳು ಬಕೆಟ್ ಹಿಡಿಯೋದು? (ಕಾರ್ತಿಕ್ ತೋರಿಸಿ) ಅಲ್ಲಿ ಕೂತಿದಾನಲ್ಲಾ ಅವ್ನು ಬಕೆಟ್ ಹಿಡಿಯೋದು’ ಎಂದು ಕಿರುಚಿದ್ದಾರೆ.
ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಾರ್ತಿಕ್ ಗಂಡಸುತನದ ಬಗ್ಗೆಯೂ ಮಾತಾಡಿದ್ದಾರೆ.

‘ಏನೋ ಗಂಡಸುತನ ಏನ್ ಮಾಡಿದೀಯಾ ಈ ಮನೆಗೆ ಬಂದು? ಮನೇಗ್ ಹೋಗಿ, ಸ್ಲೋ ಮೋಷನ್‌ನಲ್ಲಿ ನಿನ್ನ ಹೊರಗಾಕಿದ್ ನೋಡು… ಆಗ ಗೊತ್ತಾಗತ್ತೆ. ಇಲ್ಯಾವಳೋ ಕ್ರಶ್ ಅಂತೆ. ಇದ್ಯಾವ್ದೋ ಕ್ರಾಶ್ ಆದೋಳಿಟ್ಕೊಂಡು ಓಡಾಡ್ತೀಯಾ? ಅಲ್ಲೇನ್ ನನ್ ಕಾಲ್ ನೋಡ್ತೀಯಾ? ನಿನ್ ಪೊಸಿಷನ್ ಇರೋದೂ ಅಲ್ಲೇ’ ಎಂದು ಸಿನಿಮೀಯ ಶೈಲಿಯಲ್ಲಿ ಕಾರ್ತಿಕ್‌ ಅವರನ್ನು ಹೀನಾಮಾನವಾಗಿ ನಿಂದಿಸಿದ್ದಾರೆ.

ಸಣ್ಣದೊಂದು ಅಡ್ಡಮಾತು ಬಂದರೂ ಸಿಟ್ಟಿಗೆದ್ದು ಕಿರುಚಾಡುವ ಕಾರ್ತಿಕ್, ಒಂದೇ ಒಂದು ತಪ್ಪು ಮಾತಿಗೆ ಸಿಡಿದೇಳುವ ಸಂಗೀತಾ ಇಬ್ಬರೂ ಈ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನೆ ಕೂತಿದ್ದಾರೆ ಈ ವ್ಯಕ್ತತ್ವದ  ಕೊನೆಯ ಟಾಸ್ಕ್​ನಲ್ಲಿ ಗಂಧದಗುಡಿ ಟೀಮ್ ವಿನ್ ಆಗಿದೆ.

 

RELATED ARTICLES

Related Articles

TRENDING ARTICLES