Monday, December 23, 2024

ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​ಗೆ ಭರ್ಜರಿ ಗೆಲುವು

ಬೆಂಗಳೂರು : ವಿಶ್ವಕಪ್​ನಲ್ಲಿ ಆರಂಭದ ನಾಲ್ಕು ಪಂದ್ಯಗಳನ್ನು ಗೆದ್ದು ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ನ್ಯೂಜಿಲೆಂಡ್ ಲಂಕಾ ವಿರುದ್ಧ ಗೆಲುವಿನ ಲಯಕ್ಕೆ ಮರಳಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕಿವೀಸ್ ಬಹುತೇಕ ಸೆಮಿಸ್ ಪ್ರವೇಶಿಸಿದೆ.

ಶ್ರೀಲಂಕಾ ನೀಡಿದ್ದ 172 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್​ ತಂಡಕ್ಕೆ ಆರಂಭಿಕ ಆಟಗಾರರಾದ ಕಾನ್ವೆ ಹಾಗೂ ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. ಕಾನ್ವೆ 45, ರಚಿನ್ ರವೀಂದ್ರ 42 ಹಾಗೂ ಮಿಚೆಲ್ 43 ರನ್​ ಗಳಿಸಿ ಔಟಾದರು. ಈ ಮೂಲಕ ಮೂವರು ಆಟಗಾರರು ಸ್ವಲ್ಪದರಲ್ಲೇ ಅರ್ಧಶತಕ ವಂಚಿತರಾದರು.

ಉಳಿದಂತೆ ನಾಯಕ ವಿಲಿಯಮ್ಸ್ 14, ಚಾಪ್ಮನ್ 7, ಹಾಗೂ ಫಿಲಿಪ್ಸ್​ ಅಜೇಯ 17 ರನ್ ಗಳಿಸಿದರು. ಶ್ರೀಲಂಕಾ ಪರ ಏಂಜೆಲೊ ಮ್ಯಾಥ್ಯೂಸ್ 2, ಚಮೀರಾ ಹಾಗೂ ಮಹೀತ್ ತೀಕ್ಷಣ ತಲಾ ಒಂದು ವಿಕೆಟ್ ನಡೆದರು.

ಇನ್ನೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 46.4 ಓವರ್​ಗಳಲ್ಲಿ 171 ರನ್​ ಗಳಿಸಿ ಆಲೌಟ್ ಆಯಿತು. ಶ್ರೀಲಂಕಾ ಪರ ಕುಸಾಲ್ ಪೆರೇರಾ 51, ಮಹೀತ್ ತೀಕ್ಷಣ 39, ಧನಂಜಯ ಡಿ ಸಿಲ್ವಾ 19 ಹಾಗೂ ಏಂಜೆಲೊ ಮ್ಯಾಥ್ಯೂಸ್ 16 ರನ್​ ಗಳಿಸಿದರು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3, ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ ತಲಾ 2, ಟಿಮ್ ಸೌಥಿ 1 ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES