ಬೆಂಗಳೂರು : ಡಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕಿದೆ. ನಾಲ್ಕೈದು ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಪುನರ್ ರಚನೆ ಆಗಬೇಕಿದೆ. ಈ ಬಗ್ಗೆ ಹೈಕಮಾಂಡ್ ನಾಯಕರ ಬಳಿ ಚರ್ಚೆ ಮಾಡಿದ್ದೇನೆ. ಕಾವೇರಿ ವಿಚಾರವಾಗಿ ಲಾಯರ್ ಜೊತೆ ಮಾತನಾಡಿದ್ದೇನೆ. ಮೇಕೆದಾಟು ಯೋಜನೆಗೆ ನಮಗೆ ಅವಕಾಶ ಸಿಗ್ತಾ ಇದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಈ ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗ ಹೇಗೆ ಮುಖ್ಯವೋ ಹಾಗೆಯೇ ಒಬ್ಬ ಕೃಷಿಕ, ಕಾರ್ಮಿಕ, ಸೈನಿಕ ದೇಶಕ್ಕೆ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ಮಿಕರನ್ನು ರಕ್ಷಿಸಲು ಸಾಕಷ್ಟು ಕಾನೂನುಗಳನ್ನು ತಂದಿದ್ದೇವೆ. ಕಾರ್ಮಿಕರನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕಿದೆ. ನೀವು ಮಾನಸಿಕವಾಗಿ ಧೈರ್ಯವಾಗಿದ್ರೆ, ದೇಶವೇ ಭದ್ರವಾಗಿರುತ್ತದೆ. ನೀವು ನಮಗೆ ಏನು ಸಲಹೆ ಬೇಕೋ ಕೊಡಿ ಅದನ್ನ ಸ್ವೀಕರಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.