Wednesday, January 22, 2025

ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ‌ ಎಂದು ಬೋರ್ಡ್ ಹಾಕಿದ ಅಧಿಕಾರಿ

ಹಾಸನ : ಸರ್ಕಾರಿ ಕಚೇರಿಯಲ್ಲಿ ಲಂಚ ಕೊಡದೆ ಯಾವ ಕೆಲಸ ಕೂಡ ಸರಿಯಾಗಿ ಆಗುವುದಿಲ್ಲ ಎಂಬುವುದು ಎಲ್ಲರಿಗೂ ತಿಳಿದಿರುವ ಸತ್ಯ.

ಅಂದ್ರೆ ಇಲ್ಲೊಬ್ಬ ಅಧಿಕಾರಿ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ‌ ಎಂದು ಬೋರ್ಡ್​ ಬರೆಸಿ ಮೇಜಿನ ಮೇಲೆ ಇಟ್ಟಿಕೊಂಡಿದ್ದಾರೆ.ಈ  ಫೋಟೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.

ಎಲ್ಲೆಡೆ ಲಂಚ, 30 %, 40 % , 45 % ಲಂಚ ಕಮೀಷನ್  ಎಂಬ ಆರೋಪ-ಪ್ರತ್ಯಾರೋಪಗಳೇ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ  ಸರ್ಕಾರಿ ಕಛೇರಿಗಳಲ್ಲಿ ಲಂಚ ಇಲ್ಲದೆ ಏನೂ ಕೆಲಸ ಆಗಲ್ಲ ಅಂದುಕೊಂಡಿರುವ ಜನರಿಗೆ ;ಇವರ ಪ್ರಮಾಣಿಕತೆಯ ಈ ಬೋರ್ಡ್​ ಭರವಸೆ ಮೂಡಿಸಿ ಜನರಿಗೆ ಸಂತಸ ತಂದಿದೆ.

ಇದನ್ನೂ ಓದಿ: ವಂಚನೆ ಕೇಸ್​; ಅಭಿನವ ಹಾಲಶ್ರೀಗೆ ಜಾಮೀನು!

ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಡಿ.ಎಸ್.ಲೋಕೇಸ್ ಈ ರೀತಿ ಬರಹ ಇಟ್ಟುಕೊಂಡರು ಇವರು ಮಾಜಿ ಪ್ರಧಾನಿ HDD, ಮಾಜಿ ಶಾಸಕ ಪ್ರೀತಂ ಗೌಡನಿಗೆ ಆಪ್ತ ಸಹಾಯಕರಾಗಿದ್ದರು. ಈಗ BEO ಕಚೇರಿಗೆ ಅಧೀಕ್ಷರಾಗಿ ಬಡ್ತಿ ಹೊಂದಿದ್ದಾರೆ.

 

 

 

 

RELATED ARTICLES

Related Articles

TRENDING ARTICLES