Sunday, December 22, 2024

ರಾಜ್ಯದಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ 6 ಮಂದಿ ದುರ್ಮರಣ

ಕಲಬುರಗಿ : ರಾಜ್ಯದಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಲಬುರಗಿಯ ಚಿತ್ತಾಪುರ ಸಮೀಪದ ಹಲಕರ್ಟಿಯಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ಹಾಗೂ ಆಟೋ ಮಧ್ಯೆ ಈ ಅಪಘಾತ ಉಂಟಾಗಿದ್ದು, ಆಟೋದಲ್ಲಿದ್ದ 6 ಮಂದಿ ಮೃತಪಟ್ಟಿದ್ದಾರೆ.

ನಸೀಮಾ ಬೇಗಂ, ಬೀಬಿ ಫಾತಿಮಾ, ಅಬೂಬಕರ್ , ಬಿ.ಬಿ.ಮರಿಯಮ್ಮ, ಮಹ್ಮದ್ ಪಾಷ ಹಾಗೂ ಆಟೋ ಚಾಲಕ ಬಾಬಾ ಮೃತ ದುರ್ದೈವಿಗಳು. ಇವರು ಅಲ್ಲಿನ ನಾಲವಾರ ಗ್ರಾಮದ ನಿವಾಸಿಗಳಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES