Wednesday, January 22, 2025

ಮುರುಘಾಮಠದ ಶಿವಮೂರ್ತಿ ಶರಣರಿಗೆ ಜಾಮೀನು : ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜಾಮೀನು‌ ಮಂಜೂರಾದ್ರೂ ಸದ್ಯಕ್ಕೆ ಅವರಿಗೆ ಬಿಡುಗಡೆ ಭಾಗ್ಯವಿಲ್ಲ. ಮೊತ್ತೊಂದು ಪೋಕ್ಸೋ ಕೇಸ್​ನಲ್ಲಿ ಜಾಮೀನು ಪಡೆಯಬೇಕಿದೆ.

2022ರ ಸೆಪ್ಟಂಬರ್ 1ರಂದು ಅಪ್ರಾಪ್ತ ಬಾಲಕಿ ಮೇಲೆ ದಾಖಲಾಗಿದ್ದ ಒಂದು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳನ್ನು ಅರೆಸ್ಟ್ ಮಾಡಲಾಗಿತ್ತು. 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

7 ಷರತ್ತುಗಳನ್ನ ವಿಧಿಸಿ ಜಾಮೀನು ಮಂಜೂರು

  • ಚಿತ್ರದುರ್ಗ ಪ್ರವೇಶ ನಿರ್ಬಂಧ, ಮಠಕ್ಕೆ ತೆರಳುವಂತಿಲ್ಲ
  • ಇಬ್ಬರ ಶ್ಯೂರಿಟಿ, 2 ಬಾಂಡ್​ ನೀಡಲು ಕೋರ್ಟ್ ಸೂಚನೆ
  • ತಪ್ಪದೇ ವಿಡಿಯೋ ಕಾನ್ಫರೆನ್ಸ್​​ನಲ್ಲಿ ವಿಚಾರಣೆಗೆ ಹಾಜರಾಗಬೇಕು
  • ಹೈಕೋರ್ಟ್ ಏಕಸದಸ್ಯ ಪೀಠದಿಂದ ಷರತ್ತುಬದ್ಧ ಜಾಮೀನು
  • ಇಬ್ಬರು ಅಪ್ರಾಪ್ತರು ನೀಡಿದ್ದ ಪ್ರಕರಣದಲ್ಲಿ ಜಾಮೀನು
  • ಈ ಕೇಸ್​ನಲ್ಲಿ ಎರಡು ಪ್ರತ್ಯೇಕ ಚಾರ್ಜ್​ಶೀಟ್ ಸಲ್ಲಿಸಲಾಗಿತ್ತು
  • ಜಾಮೀನು ಅರ್ಜಿ‌ ನಿರಾಕರಿಸಿದ್ದ ಅಧೀನ ನ್ಯಾಯಾಲಯ
  • ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ ಶಿವಮೂರ್ತಿ
  • ಜಾಮೀನು‌ ಮಂಜೂರಾದ್ರೂ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ
  • ಮೊತ್ತೊಂದು ಪೋಕ್ಸೋ ಕೇಸ್​ನಲ್ಲಿ ಪಡೆಯಬೇಕಿದೆ ಜಾಮೀನು

ಏನಿದು ಪ್ರಕರಣ?

ಮುರುಘಾ ಮಠದ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಮುರುಘಾ ಶ್ರೀಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಮಾಹಿತಿ ನೀಡಿದ್ದರು. ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಮುರುಘಾ ಶ್ರೀಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. 2022ರ ಸೆಪ್ಟೆಂಬರ್ 1ರಿಂದ ಜೈಲುವಾಸ ಅನುಭವಿಸುತ್ತಿದ್ದರು.

RELATED ARTICLES

Related Articles

TRENDING ARTICLES