Wednesday, January 22, 2025

‘ಪವರ್’ ವರದಿ ಬೆನ್ನೆಲ್ಲೇ ಎಚ್ಚೆತ್ತ ಸರ್ಕಾರ : ಬೆಂಗಳೂರು ಒನ್ ಕೇಂದ್ರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

ಬೆಂಗಳೂರು : ಕಾಂಗ್ರೆಸ್​ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ವಿಳಂಬದ ಬಗೆಗೆ ಪವರ್ ಟಿವಿ ವರದಿ ವಿಸ್ತರಿಸಿತ್ತು. ಈ ವರದಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚೆತ್ತುಕೊಂಡಿದ್ದಾರೆ.

ಬೆಂಗಳೂರು ಒನ್ ಕೇಂದ್ರಕ್ಕೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಗೃಹಲಕ್ಷ್ಮೀ ‌ಯೋಜನೆಗೆ ನೋಂದಣಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮಲ್ಲೇಶ್ವರಂ ಬೆಂಗಳೂರು ಒನ್ ಸೆಂಟರ್​ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪರಿಶೀಲನೆ ನಡೆಸಿ ಪ್ರತಿ ಜಿಲ್ಲೆಯಿಂದಲೂ ಮಾಹಿತಿ ಪಡೆಯುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲೇ 14 ಸಾವಿರ ‘ಗೃಹಲಕ್ಷ್ಮೀ’ ಅರ್ಜಿ ಬಾಕಿ ಇದೆ. ಈ ಹಿನ್ನೆಲೆ ಕಲಬುರಗಿ ಸಿಡಿಪಿಒಗೆ ತರಾಟೆ ತೆಗೆದುಕೊಂಡಿದ್ದಾರೆ. ಆದಷ್ಟು ಬೇಗ ಅರ್ಜಿಯನ್ನು ವಿಲೇವಾರಿ ‌ಮಾಡಲು ಏನು ಸಮಸ್ಯೆ? ಏಕೆ ಇಷ್ಟು ಅರ್ಜಿ ಬಾಕಿ ಇದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಾರದೊಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ CDPO ತಿಳಿಸಿದ್ದಾರೆ.

ಕಾಂಗ್ರೆಸ್ ​ಸರ್ಕಾರಕ್ಕೆ ಹಿಡಿಶಾಪ

‘ಗ್ಯಾರಂಟಿ’ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸೋತಿದ್ಯಾ ಎಂಬ ಪ್ರಶ್ನೆ ಎಲ್ಲೆಡೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯಾದ್ಯಂತ ಪವರ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ. ಅಧಿಕಾರಕ್ಕೆ ಬಂದು 5 ತಿಂಗಳು ಕಳೆದರೂ ‘ಕಾಂಗ್ರೆಸ್​ ಉಚಿತ ಗ್ಯಾರಂಟಿ’ಗಳು ಸಂಪೂರ್ಣವಾಗಿ ಜನರಿಗೆ ತಲುಪಿಲ್ಲ. ಅನ್ನಭಾಗ್ಯ ಅಕ್ಕಿ ಹಣವೂ ಅದೆಷ್ಟೋ ಜನರಿಗೆ ತಲುಪಿಲ್ಲ. ಇನ್ನು, ಗೃಹಲಕ್ಷ್ಮಿಗೆ ಅರ್ಜಿ ಹಾಕಿದವರಿಗೆ ಮೊದಲ ತಿಂಗಳಿನ 2 ಸಾವಿರವೇ ಬಂದಿಲ್ಲ ಎಂದು ಗೃಹಿಣಿಯರು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಗ್ಯಾರಂಟಿಗಳು ಎಲ್ಲರಿಗೂ ಸಿಗೋ ಗ್ಯಾರಂಟಿ ಇಲ್ಲ ಎಂದು ಸಾರ್ವನಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

RELATED ARTICLES

Related Articles

TRENDING ARTICLES