Wednesday, January 22, 2025

ಬೆಳಕಿನ ಹಬ್ಬಕ್ಕೆ ಕ್ಷಣಗಣನೆ ಶುರು : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ ತರಹೇವಾರಿ ದೀಪಗಳು

ಬೆಂಗಳೂರು : ಬೆಳಕಿನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ, ಮಾರುಕಟ್ಟೆಗೂ ತರಹೇವಾರಿ ದೀಪಗಳು ಎಂಟ್ರಿ ಕೊಟ್ಟಿವೆ. ಕಲ್ಲರ್ ಕಲ್ಲರ್ ದೀಪಗಳಿಗೆ ಮನಸೋತ ಮಹಿಳೆಯರು ದೀಪಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ದೀಪಾವಳಿ ಹಬ್ಬ ಬಂದ್ರೆ ಸಾಕು ಎಲ್ಲರ ಮನೆಯಲ್ಲಿ ದೀಪ ಬೆಳಗಿಸಲು ಹಬ್ಬಕ್ಕೂ ಮುಂಚೆ ತರಹೇವಾರಿ ದೀಪಗಳ ಖರೀದಿಗೆ ಜನ ಖಾತುರದಿಂದ ಕಾಯ್ತಿರ್ತಾರೆ. ಇನ್ನೇನು ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಅರಂಭ ಆಗಿದೆ. ಮಹಿಳೆಯರು ಸಹ ಹಬ್ಬಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಒಂದ್ಕಡೆ ವೆರೈಟಿ ವೆರೈಟಿ ಹಣತೆಗಳು. ಇನ್ನೊಂದ್ಕಡೆ ಕಣ್ಮನ ಸೆಳೆಯುತ್ತಿರುವ ಲೈಟಿಂಗ್ಸ್ ದೀಪಗಳು. ಕಣ್ಣು ಹಾಯಿಸಿದರೆ ಡೆಕೋರೆಟ್ ವಸ್ತುಗಳು. ಇವೆಲ್ಲ ಕಂಡು ಬಂದಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ.

ದೀಪಾವಳಿಯ ಪ್ರಮುಖ ಆಕರ್ಷಣೆಗಳಾಗಿರುವ ಹಣತೆ, ಫ್ಯಾನ್ಸಿ ಹಾಗೂ ಅಲಂಕಾರಿಕ ದೀಪಗಳು ಮಲ್ಲೆಶ್ವರಂನಲ್ಲಿ ಸಿಗ್ತಿದ್ದು ಪಂಚಮುಖಿ ದೀಪ, ಲಕ್ಷ್ಮೀ ದೇವಿ, ಗಣೇಶ ದೀಪ, ನವಿಲು ದೀಪ, ಮೀನಿನ ದೀಪ ಸೇರಿ ಹಲವು ವಿನ್ಯಾಸಗಳಿಂದ ಕೂಡಿರುವ ಮಣ್ಣಿನಿಂದ ಮಾಡಿದ ದೀಪಗಳ ಖರೀದಿಗೆ ರಾಜಧಾನಿ ಮಂದಿ ಬಹಳ ಉತ್ಸುಕಾರಾಗಿದ್ದರು.

300ಕ್ಕೂ ಹೆಚ್ಚು ವೆರೈಟಿ ದೀಪಗಳು

ಇನ್ನು ಮಣ್ಣಿನಿಂದ ಮಾಡಿದ ಭಿನ್ನ ಭಿನ್ನ ಶೈಲಿಯ ಹಣತೆಗಳು ಮಾರುಕಟ್ಟೆ ಪ್ರವೇಶಿಸಿದ್ದು ಜನರನ್ನು ಆಕರ್ಷಿಸುತ್ತಿದೆ,ಇನ್ನು ಟೆರಕೋಟಾ, ಮೆಟಲ್, ಪಿಂಗಾಣಿ, ಗಾಜು, ಫೈಬರ್ ಗಳ ದೀಪಗಳಿದ್ದು, ಅದರಲ್ಲೂ ವಿಶೇಷವಾಗಿ ಹ್ಯಾಂಗಿಂಗ್ ಲ್ಯಾಂಪ್ಸ್, ಫ್ಲೋರ್ ಲ್ಯಾಂಪ್ಸ್, ಫ್ಲೈ ಲ್ಯಾಂಪ್ಸ್, ಕಮಲದ ದೀಪಗಳು, ಗೊಂಬೆ ದೀಪಗಳು ಸೇರಿದಂತೆ 300ಕ್ಕೂ ಹೆಚ್ಚು ವೆರಾಯಿಟಿ ದೀಪಗಳಿವೆ. ಅದರಲ್ಲೂ ವಿಶೇಷವಾಗಿ ಗಣೇಶನ ದೀಪಗಳು ಕಣ್ಮನ ಸೆಳೆಯುವಂತಿದ್ವು. ಇನ್ನು ದೀಪಾವಳಿಗಾಗಿ ಡೆಕೋರೆಟ್ ವಸ್ತುಗಳು ಕೂಡ ಗ್ರಾಹಕರನ್ನು ಸೆಳೆಯುತ್ತಿದ್ದು, ದೀಪಗಳು 20 ರೂಪಾಯಿಯಿಂದ ಜನರಿಗೆ ದೊರೆಯಲಿದೆ.

RELATED ARTICLES

Related Articles

TRENDING ARTICLES