ಕಲಬುರಗಿ : ಕಿಯೋನಿಕ್ಸ್ ಹಗರಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅವರದ್ದು ಸುಳ್ಳಿನ ಕಾರ್ಖಾನೆ. ಕಿಯೋನೆಕ್ಸ್ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡುತ್ತೇನೆ. ಬಳಿಕ ಯಾರು ರಾಜೀನಾಮೆ ಕೊಡಬೇಕು ಅನ್ನುವುದು ತಾವೇ ತೀರ್ಮಾನ ಮಾಡಿ. ಬಿಜೆಪಿ ಅವರಿಗೆ ಸ್ವಲ್ಪನಾದರೂ ಕಾಮನ್ ಸೆನ್ಸ್ ಇಲ್ವಾ.
ನಾವು ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು, ಒಂದು ಆರ್ಡರ್ ಕೂಡ ಇಶ್ಯೂ ಮಾಡಿಲ್ಲ. ಥರ್ಡ್ ಪಾರ್ಟಿ ಇನ್ಫೆಕ್ಷನ್ ಇಲ್ಲದೆ ಹಣ ಬಿಡುಗಡೆಗೆ ಬಿಜೆಪಿಯವರು ಹೇಳುತ್ತಿದ್ದಾರಲ್ಲ.ಹಣ ಕೊಡಲು ಇದೇನು ಅವರ ಸರಕಾರನಾ ? ಸಾರ್ವಜನಿಕರ ದುಡ್ಡು, ಜನರು ತೆರಿಗೆ ಕಟ್ಟಿದ ದುಡ್ಡು. ಇದು 40% ಸರ್ಕಾರ ಅಲ್ಲ.
ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಅವರಿಗೆ 100 ಪರ್ಸೆಂಟ್ ಹಣ ಸಿಕ್ಕೇ ಸಿಗುತ್ತೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಬಿಜೆಪಿಯವರಿಗೆ ಏನು ಅಷ್ಟು ಅರ್ಜೆಂಟ್ ಅವರ ಹೆಸರುಗಳೆಲ್ಲ ತಿಳಿದುಕೊಳ್ಳಕ್ಕೆ. ಬಿಜೆಪಿ ಅವರು ಸ್ವಲ್ಪ ಅಧ್ಯಯನ ಮಾಡುವುದು ಕಲಿಬೇಕು. ಇನ್ನೊಂದು 20-30 ಗಂಟೆ ನಂತರ ರಾಜೀನಾಮೆ ಕೇಳುತ್ತೀರಿ ಅವಾಗ ನಿಮಗೆ ಗೊತ್ತಾಗುತ್ತೆ ಎಂದರು.