Wednesday, January 22, 2025

ರಾಜ್ಯದಲ್ಲಿ‌ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ್​​​​​​​​​​​​​​​

ವಿಜಯಪುರ : ಸಿಎಂ ಸಿದ್ದರಾಮಯ್ಯನವರು ಎಷ್ಟು ದಿನ ಸಿಎಂ ಆಗಿ ಅಧಿಕಾರದಲ್ಲಿ ಮುಂದುವರೆಯುತ್ತಾರೋ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್​​​​​​​​​​​​​​​  ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತಾನಾಡಿದ ಅವರು, ರಾಜ್ಯದಲ್ಲಿ‌ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ನಮ್ಮ‌ ಸಿಎಂ ಪ್ರಾಮಾಣಿಕ, ಶುದ್ದಹಸ್ತರು, ಜನರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಪ್ರಧಾನಿಯವರ ಹೇಳಿಕೆ ವಾಸ್ತವಿಕತೆಗೆ ಸಮೀಪ ಇರದ ವಿಚಾರ.

ಪ್ರಧಾನಿ ಅವರ ಬಾಯಲ್ಲಿ ಸಿಎಂ ಹೆಸರು ಬರುತ್ತಿದೆ ಅಂದ್ರೆ ಸಿಎಂ ಅವರ ಜನಪ್ರಿಯತೆ ಸೂಕ್ಷ್ಮವಾಗಿ ಎಲ್ಲರೂ  ಗಮನಿಸಬೇಕು.

ಇದನ್ನೂ ಓದಿ: ಸರ್ಕಾರ ಬದುಕಿದ್ದೂ ಸತ್ತಂತೆ  : ಬಿಎಸ್​ ಯಡಿಯೂರಪ್ಪ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಗ್ಯಾರಂಟಿಗಳಿಂದ ದೇಶಾದ್ಯಂತ ಬದಲಾವಣೆ ಗಾಳಿ ಬೀಸುತ್ತಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರನ್ನ ಪ್ರಧಾನಿ‌ ಮೋದಿಯವರು ನೆನಪಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ಜನಪ್ರಿಯತೆಯನ್ನ ಸೂಕ್ಷ್ಮವಾಗಿ ಪ್ರಧಾನಿ ಮೋದಿ ಅವರು ತಿಳಿದುಕೊಂಡಿದ್ದಾರೆ ಎಂದರು.

 

RELATED ARTICLES

Related Articles

TRENDING ARTICLES