Wednesday, January 22, 2025

ಆರ್.ಡಿ. ಪಾಟೀಲ್ ಬೆಂಬಲಕ್ಕೆ ಕಾಂಗ್ರೆಸ್ ಸರ್ಕಾರವೇ ನಿಂತಿದೆ : ಬಿ.ವೈ ವಿಜಯೇಂದ್ರ

ಕಲಬುರಗಿ : ಪರೀಕ್ಷಾ ಅಕ್ರಮ ಎಸಗಿರುವ ಆರ್.ಡಿ. ಪಾಟೀಲ್‌ ಬೆಂಬಲಕ್ಕೆ ಕಾಂಗ್ರೆಸ್​ ಸರ್ಕಾರವೇ ನಿಂತಿದೆ. ಆರೋಪಿಯನ್ನು ಬಂಧಿಸುವ ಸುಲಭ ಅವಕಾಶವಿದ್ದರೂ ಸರ್ಕಾರವೇ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದರು.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ ನಾಯಕರು ವಿನಾ ಕಾರಣ ಬಿಜೆಪಿಯ ಮೇಲೆ ಆರೋಪ ಮಾಡಿ, ಇದೀಗ ಆರೋಪಿ ಸ್ಥಾನದಲ್ಲಿರುವವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ನಿಜವಾಗಿಯೂ ಇದು ಖಂಡನೀಯ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​ನವರು ನಾನಾ ರೀತಿಯ ಆರೋಪ ಮಾಡಿದ್ದರು. ನೇರವಾಗಿ ಹೇಳಬೇಕೆಂದರೆ ಇದೇ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆರ್.ಡಿ ಪಾಟೀಲ್ ಹಾಗೂ ಅವರ ಎಂಟೇರ್ ಟೀಂ ಏನಿದೆ ಇವರೆಲ್ಲರೂ ಕೂಡ ಕಾಂಗ್ರೆಸ್​ನ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವರು ಸಹಕಾರ ಕೊಡುತ್ತಿದ್ದಾರೆ

ಆರ್.ಡಿ ಪಾಟೀಲ್ ಪರಾರಿಯಾಗಿರುವ ಪಿತೂರಿಗೆ ಸ್ವತಃ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಸಹಕಾರ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಇಡೀ ಕಾಂಗ್ರೆಸ್​ ಪಕ್ಷ ಈ ರೀತಿ ವ್ಯಕ್ತಿಗಳ ಬೆನ್ನ ಹಿಂದೆ ಬೆನ್ನೆಲುಬಾಗಿ ನಿಂತಿದ್ದಾರೆ, ಅವರಿಗೆ ಶಕ್ತಿ ನೀಡುತ್ತಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES