Monday, December 23, 2024

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ತುಷ್ಟೀಕರಣ : ಪ್ರಧಾನಿ ಮೋದಿ

ಹೈದರಾಬಾದ್ : ಕಾಂಗ್ರೆಸ್ (Congress) ಹಾಗೂ ಭಾರತ ರಾಷ್ಟ್ರ ಸಮಿತಿ (BRS) ಎಂದರೆ ರಾಜವಂಶ (ಕುಟುಂಬ ರಾಜಕಾರಣ), ಭ್ರಷ್ಟಾಚಾರ ಹಾಗೂ ತುಷ್ಟೀಕರಣ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಹೈದರಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣದ BRS ಪಕ್ಷ ತನ್ನ ಕುಟುಂಬದ ಹಿತಾಸಕ್ತಿಗಳನ್ನು ಪೂರೈಸುವಲ್ಲಿ ನಿರತವಾಗಿದೆ. ನಮ್ಮ BCಯ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ ಎಂದು ಕುಟುಕಿದರು.

ತೆಲಂಗಾಣದಲ್ಲಿ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ. ನೀವು ತೆಲಂಗಾಣದ ಮೂಲೆ ಮೂಲೆಯಿಂದ ಸಮಾರಂಭಕ್ಕೆ ಬಂದಿದ್ದೀರಿ ಮತ್ತು ನಿಮ್ಮೊಂದಿಗೆ ಸ್ಪಷ್ಟ ಸಂದೇಶವನ್ನು ತಂದಿದ್ದೀರಿ. ತೆಲಂಗಾಣ ಈಗ ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ ಎಂದರು.

ಇದು ಎನ್​ಡಿಎ (NDA), ಇದು ಬಿಜೆಪಿ, ಒಬಿಸಿ ಹಿತಾಸಕ್ತಿಗಳನ್ನು ಹೆಚ್ಚು ಕಾಳಜಿ ವಹಿಸುತ್ತದೆ ಹಾಗೂ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತದೆ. ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ 27 ಒಬಿಸಿ ಸಚಿವರಿದ್ದು, ಇದು ಸ್ವಾತಂತ್ರ್ಯದ ನಂತರದ ಗರಿಷ್ಠವಾಗಿದೆ. ಇಂದು ದೇಶದಲ್ಲಿ ಬಿಜೆಪಿ 85 ಒಬಿಸಿ ಸಂಸದರನ್ನು ಹೊಂದಿದೆ. ಇಂದು ಬಿಜೆಪಿ ದೇಶದಲ್ಲಿ 365 ಒಬಿಸಿ ಶಾಸಕರನ್ನು ಹೊಂದಿದೆ ಎಂದು ಹೇಳಿದರು.

ಸರಕಾರ ಕಿತ್ತೊಗೆಯುವ ಅವಕಾಶ

ತೆಲಂಗಾಣದಲ್ಲಿ ಎಲ್ಲಾ ಸಮುದಾಯಗಳ ಜನರು BC, SC, ST ಮತ್ತು ಎಲ್ಲರೂ ಬದಲಾವಣೆಗೆ ನಿರ್ಧರಿಸಿದ್ದಾರೆ. ತೆಲಂಗಾಣದಲ್ಲಿ ಕಳೆದ 9 ವರ್ಷಗಳಿಂದ ಅಭಿವೃದ್ಧಿ ವಿರೋಧಿ, ಬಿ.ಸಿ, ಎಸ್.ಸಿ, ಎಸ್.ಟಿ ವಿರೋಧಿ ಸರಕಾರವಿದೆ. ತೆಲಂಗಾಣದ ಈ ಬಿ.ಸಿ ವಿರೋಧಿ ಸರಕಾರವನ್ನು ಕಿತ್ತೊಗೆಯಲು ನಿಮಗೆ ಉತ್ತಮ ಅವಕಾಶವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

RELATED ARTICLES

Related Articles

TRENDING ARTICLES