ಬೆಂಗಳೂರು : ‘ಗ್ಯಾರಂಟಿ’ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸೋತಿದ್ಯಾ ಎಂಬ ಪ್ರಶ್ನೆ ಎಲ್ಲೆಡೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯಾದ್ಯಂತ ಪವರ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ 2 ಸಾವಿರದ ಗ್ಯಾರಂಟಿಯ ವಾಸ್ತವ ಸ್ಥಿತಿಯನ್ನ ಪತ್ತೆ ಹಚ್ಚಲಾಯಿತು. ಈ ಮೂಲಕ ಮಹಿಳೆಯರ ಮತ ಸೆಳೆಯಲು ಗೃಹಲಕ್ಷ್ಮಿ ಸಕ್ಸಸ್ ಆಗಿದ್ರು, 5 ಗ್ಯಾರಂಟಿ ಜಾರಿಗೆ ತರುವಲ್ಲಿ ಸರ್ಕಾರ ಫೇಲ್ಯೂರ್ ಆಗಿರೋದು ಮೇಲ್ನೋಟಕ್ಕೆ ಕಂಡುಬಂದಿದೆ.
ಅಧಿಕಾರಕ್ಕೆ ಬಂದು 5 ತಿಂಗಳು ಕಳೆದರೂ ‘ಕಾಂಗ್ರೆಸ್ ಉಚಿತ ಗ್ಯಾರಂಟಿ’ಗಳು ಸಂಪೂರ್ಣವಾಗಿ ಜನರಿಗೆ ತಲುಪಿಲ್ಲ. ಅನ್ನಭಾಗ್ಯ ಅಕ್ಕಿ ಹಣವೂ ಅದೆಷ್ಟೋ ಜನರಿಗೆ ತಲುಪಿಲ್ಲ. ಇನ್ನು, ಗೃಹಲಕ್ಷ್ಮಿಗೆ ಅರ್ಜಿ ಹಾಕಿದವರಿಗೆ ಮೊದಲ ತಿಂಗಳಿನ 2 ಸಾವಿರವೇ ಬಂದಿಲ್ಲ ಎಂದು ಗೃಹಿಣಿಯರು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಗ್ಯಾರಂಟಿಗಳು ಎಲ್ಲರಿಗೂ ಸಿಗೋ ಗ್ಯಾರಂಟಿ ಇಲ್ಲ ಎಂದು ಸಾರ್ವನಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಕಾಲಮಿತಿಯೊಳಗೆ ಗ್ಯಾರಂಟಿ ತಲುಪಿಸಲು ಕ್ರಮ
ಆಡಳಿತಾತ್ಮಕ ಮತ್ತು ಜನಹಿತದ ದೃಷ್ಟಿಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯವನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆಡಳಿತಾತ್ಮಕ ಮತ್ತು ಜನಹಿತದ ದೃಷ್ಟಿಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯವನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.
– ಮುಖ್ಯಮಂತ್ರಿ @siddaramaiah#ಅಭಿವೃದ್ಧಿಯ_ಗ್ಯಾರಂಟಿ_ಸರ್ಕಾರ pic.twitter.com/74E7BjXmoQ— CM of Karnataka (@CMofKarnataka) November 7, 2023