ಬೀದರ್ : ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವುದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಬೀದರ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಕಾಪಿ ಮಾಡಿದ್ದಾರೆ. ಎಲ್ಲಾ ಕಾರ್ಯಕ್ರಮಗಳ ಹೆಸರು ಬದಲಾವಣೆ ಮಾಡಿ 70 ವರ್ಷದ ನಮ್ಮ ಯೋಜನೆ ಜಾರಿ ಮಾಡಿದ್ದಾರೆ ಎಂದು ಕುಟುಕಿದ್ದಾರೆ.
ಪ್ರಧಾನಿ ಮೋದಿ ಬೇರೆ ರಾಜ್ಯಕ್ಕೆ ಹೋಗಿ ನಮ್ಮ ರಾಜ್ಯದ ಬಗ್ಗೆ ಟೀಕೆ ಮಾಡುತ್ತಾರೆ. ನಮ್ಮ ರಾಜ್ಯದಲ್ಲಿ ಬರ ಬಂದಿದೆ ಏನಾದ್ರು ಅನುದಾನ ಕೊಟ್ರಾ? ಅದಾನಿಗೂ ಸಾಲ ಕೊಡುತ್ತಾರೆ. ನಮ್ಮಗೆ ಕೊಡೋಕೆ ಹಣ ಇಲ್ವಾ? ಮೋದಿ ವಿಶ್ವಗುರು ಇದ್ದಾರೆ. ಬಡತನ ನಿರ್ಮೂಲನೆ ಮಾಡಬಹುದಲ್ವಾ? ಯಾವ ರೈತರಿಗೆ ಬಡ್ಡಿ ರಹಿತ ಸಾಲ ಕೊಟ್ಟಿದ್ದಾರೆ? ಮೇಕಿಂಗ್ ಇಂಡಿಯಾ ಮಾಡಿದ್ರು, ಒಂದು ಸೂಜಿನಾದರೂ ತಯಾರು ಮಾಡಿದ್ರಾ? ಮೋದಿ ವಿರುದ್ಧ ಸಂತೋಷ್ ಲಾಡ್ ಎಂದು ವಾಗ್ದಾಳಿ ನಡೆಸಿದ್ದಾರೆ.