Monday, November 18, 2024

ಮೋದಿ ಬಳಿ ರೈತರಿಗೆ ನೀಡಲು ಹಣವಿಲ್ಲ, ವಿಮಾನ ಖರೀದಿಸಲು ಹಣವಿದೆ : ಪ್ರಿಯಾಂಕಾ ಗಾಂಧಿ

ಮಧ್ಯಪ್ರದೇಶ : ಪ್ರಧಾನಿ ನರೇಂದ್ರ ಮೋದಿಯವರ ಬಳಿ ರೈತರಿಗೆ ನೀಡಲು ಹಣವಿಲ್ಲ. ಆದರೆ, ತನಗಾಗಿ ವಿಮಾನ ಖರೀದಿಸಲು ಹಾಗೂ ಸಂಸತ್ತಿನ ಸೌಂದರ್ಯವನ್ನು ಅಲಂಕರಿಸಲು ಹಣವಿದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢದ ಕುರುದ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

8 ಸಾವಿರ ಕೋಟಿ ಮೌಲ್ಯದ ಹಡಗನ್ನು ಪ್ರಧಾನಿ ಮೋದಿ ಖರೀದಿಸಿದ್ದಾರೆ. ನೂತನ ಸಂಸತ್ ಭವನದ ಕಟ್ಟಡ ಮತ್ತು ಸೌಂದರ್ಯೀಕರಣಕ್ಕೆ 20 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕೋಟಿಗಟ್ಟಲೆ ಖರ್ಚು ಮಾಡುವುದಾಗಿ ಘೋಷಿಸಿದಾಗ ಕಬ್ಬು ಬೆಳೆಗಾರರು ಬಾಕಿ ಹಣ ನೀಡುವಂತೆ ಆಗ್ರಹಿಸಿ, ಕರಾಳ ಕೃಷಿ ಕಾಯ್ದೆ ವಿರುದ್ಧ ರೈತರು ಬೀದಿಗಿಳಿದಿದ್ದರು. ಆಗ ಮೋದಿ ಅವರು ನಮ್ಮಲ್ಲಿ ಬಾಕಿ ಪಾವತಿಸಲು ಹಣವಿಲ್ಲ ಅಂತ ಹೇಳಿದ್ದರು ಎಂದು ಚಾಟಿ ಬೀಸಿದ್ದಾರೆ.

ತಾವು ಒಬಿಸಿ ಮತ್ತು ಒಬಿಸಿ ವರ್ಗಕ್ಕಾಗಿ ಕೆಲಸ ಮಾಡಲು ಬಯಸುವುದಾಗಿ ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಕಾಂಗ್ರೆಸ್ ಜಾತಿ ಗಣತಿ ಬಗ್ಗೆ ಮಾತನಾಡಿದರೆ, ಈ ವಿಷಯದ ಬಗ್ಗೆ ಅವರು ಕೋಪಗೊಳ್ಳುತ್ತಾರೆ. ಬಿಜೆಪಿಯವರು ಬರೀ ಪೊಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ಮೋದಿ ವಿರುದ್ಧ ಗುಡುಗಿದ್ದಾರೆ.

ನಾವು ಸತ್ಯವನ್ನು ಹೇಳುತ್ತಿದ್ದೇವೆ

ನಾವು ನಿಮಗೆ ಭರವಸೆ ನೀಡಿದಾಗ, ನೀವು ನಮ್ಮ ಮಾತುಗಳನ್ನು ನಂಬುತ್ತೀರಿ. ನಾವು ಸತ್ಯವನ್ನು ಹೇಳುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ. ನಾವು ಮಾಡಿರುವುದು ಇದಕ್ಕೆ ಕಾರಣ. ಇಂದು ಛತ್ತೀಸ್‌ಗಢದಲ್ಲಿ ಪ್ರತಿ ಕ್ವಿಂಟಲ್‌ಗೆ 2,640 ರೂ.ಗೆ ಭತ್ತ ಖರೀದಿಸಲಾಗುತ್ತಿದೆ. ರಾಜಸ್ಥಾನದಲ್ಲಿ 25 ಲಕ್ಷದವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಆದ್ದರಿಂದ ನಮ್ಮ ಮಾತುಗಳಿಗೆ ಆಧಾರವಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES