Monday, December 23, 2024

ಮ್ಯಾಕ್ಸಿ ವಿಧ್ವಂಸಕ ದ್ವಿಶತಕ : RCB ಸ್ಟಾರ್ ಆರ್ಭಟಕ್ಕೆ ಕ್ರಿಕೆಟ್ ಇತಿಹಾಸದ ದಾಖಲೆ ಉಡೀಸ್

ಬೆಂಗಳೂರು : ಆರ್​ಸಿಬಿ ಸ್ಟಾರ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್​ವೆಲ್ ತೂಫಾನ್ ದ್ವಿಶತಕಕ್ಕೆ ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳು ಉಡೀಸ್ ಆಗಿವೆ.

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಸಿಸ್​ ಆಲ್​ರೌಂಡರ್ ಮ್ಯಾಕ್ಸ್​ವೆಲ್ ಕ್ರಿಕಟ್ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿದರು. 97 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾವನ್ನು ಮ್ಯಾಕ್ಸ್​ವೆಲ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್​ ಜೋಡಿ ದಾಖಲೆಯ ಜೊತೆಯಾಟದಿಂದ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

8ನೇ ವಿಕೆಟ್​ ಜೊತೆಯಾಟಕ್ಕೆ ಮ್ಯಾಕ್ಸ್​ವೆಲ್ ಹಾಗೂ ಪ್ಯಾಟ್ ಕಮಿನ್ಸ್​ 202 ರನ್​ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಬಲ ತೊಡೆಯ ಸ್ಮಾಯು ಸೆಳೆತದ ನಡುವೆಯೂ ಆಸಿಸ್​ ಆಟಗಾರ ಕ್ರೀಸ್​ನಲ್ಲಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು. ಮ್ಯಾಕ್ಸ್​ವೆಲ್ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಏಕದಿನದಲ್ಲಿ ನಾನ್ ಓಪನರ್‌ ಗರಿಷ್ಠ ಸ್ಕೋರ್

201* : ಗ್ಲೆನ್ ಮ್ಯಾಕ್ಸ್‌ವೆಲ್ (AUS) vs AFG, ಮುಂಬೈ (2023)

194* : ಚಾರ್ಲ್ಸ್ ಕೋವೆಂಟ್ರಿ (ZIM) vs BAN, ಬುಲವಾಯೊ (2009)

189* : ವಿವ್ ರಿಚರ್ಡ್ಸ್ (WI) vs ಇಎನ್‌ಜಿ, ಮ್ಯಾಂಚೆಸ್ಟರ್ (1984)

185 : ಫಾಫ್ ಡು ಪ್ಲೆಸಿಸ್ (SA) ವಿರುದ್ಧ SL, ಕೇಪ್ ಟೌನ್ (2017)

 

ಅತಿ ವೇಗದ ದ್ವಿಶತಕ (ಎಸೆತಗಳು)

126 ಎಸೆತ : ಇಶಾನ್ ಕಿಶನ್ (IND) vs BAN, ಚಟ್ಟೋಗ್ರಾಮ್ (2022)

128 ಎಸೆತ : ಗ್ಲೆನ್ ಮ್ಯಾಕ್ಸ್‌ವೆಲ್ (AUS) vs AFG, ಮುಂಬೈ (2023)

138 ಎಸೆತ : ಕ್ರಿಸ್ ಗೇಲ್ (WI) vs ZIM, ಕ್ಯಾನ್‌ಬೆರಾ (2023)

 

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್

49 : ಕ್ರಿಸ್ ಗೇಲ್

45 : ರೋಹಿತ್ ಶರ್ಮಾ

43 : ಗ್ಲೆನ್ ಮ್ಯಾಕ್ಸ್‌ವೆಲ್

37 : ಎಬಿ ಡಿವಿಲಿಯರ್ಸ್

37 : ಡೇವಿಡ್ ವಾರ್ನರ್

 

8ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟ

202* :  ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮ್ಮಿನ್ಸ್ (AFG-2023)

177 : ಜೋಸ್ ಬಟ್ಲರ್ ಮತ್ತು ಆದಿಲ್ ರಶೀದ್ (NZ-2015)

174* : ಅಫೀಫ್ ಹೊಸೈನ್ ಮತ್ತು ಮೆಹಿದಿ ಹಸನ್ ಮಿರಾಜ್ (2022)

162 : ಮೈಕೆಲ್ ಬ್ರೇಸ್‌ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ (IND-2023)

 

RELATED ARTICLES

Related Articles

TRENDING ARTICLES