Monday, December 23, 2024

ಮ್ಯಾಕ್ಸ್​ವೆಲ್ ದ್ವಿಶತಕ : ಅಫ್ಘಾನ್ ವಿರುದ್ಧ ಆಸ್ಟ್ರೇಲಿಯಾಗೆ ಪ್ರಚಂಡ ಗೆಲುವು

ಬೆಂಗಳೂರು : ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ 3 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ವಿಶ್ವಕಪ್​ನಲ್ಲಿ ಮತ್ತೊಂದು ನಂಬಲಾಗದ ಗೆಲುವು ದಾಖಲಾಗಿದೆ. 292 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 46.5 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಆಸ್ಟ್ರೇಲಿಯಾದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಏಕಾಂಗಿಯಾಗಿ ಅಬ್ಬರಿಸಿ ಬೊಬ್ಬಿರಿದರು. 128 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 21 ಬೌಂಡರಿ ನೆರವಿನೊಂದಿಗೆ ಭರ್ಜರಿ ದ್ವಿಶತಕ (201*) ಸಿಡಿಸಿ ತಂಡವನ್ನು ಗೆಲ್ಲಿಸಿದರು.

ದಾಖಲೆ ಬರೆದ ಮ್ಯಾಕ್ಸ್​ವೆಲ್

ಮ್ಯಾಕ್ಸ್​ವೆಲ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಏಕದಿನದಲ್ಲಿ 200 ರನ್​ ಗಳಿಸಿದ ಆಸ್ಟ್ರೇಲಿಯಾಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮ್ಯಾಕ್ಸಿ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್​ ಚೇಸರ್ ಹಾಗೂ ಟೂರ್ನಿಯಲ್ಲಿ ಮೊದಲ ದ್ವಿಶತಕ ಸಿಡಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು.

RELATED ARTICLES

Related Articles

TRENDING ARTICLES