ಕಲಬುರಗಿ : ಕೆಇಎ (KEA) ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಎಸ್ಕೇಪ್ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪರೀಕ್ಷೆಯಲ್ಲಿ ಅಕ್ರಮವಾದಾಗ ಸುಮ್ಮನೆ ಕುಳಿತಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹಾರಿಸೋದು ಬಿಡಬೇಕು. ಇದರ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದ್ರು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಆರ್.ಡಿ. ಪಾಟೀಲ್‌ಗೆ ನಾವಾಗಲಿ ನಮ್ಮ ಸರ್ಕಾರವಾಗಲಿ ದಯೆ ತೋರಿಸೋ ಉದ್ದೇಶವಿಲ್ಲ. ನಾವು ಕಳೆದ ನಾಲ್ಕು ದಿನಗಳಲ್ಲಿ 20 ಜನಗಳಿಗಿಂತ ಅಧಿಕ ಮಂದಿಯನ್ನು ಅರೆಸ್ಟ್ ಮಾಡಿದ್ದೀವಿ. ಆರ್.ಡಿ. ಪಾಟೀಲ್ ಕೂಡ ಇನ್ನೊಂದು ಎರಡು ಅಥವಾ ಮೂರು ದಿನಗಳಲ್ಲಿ ಸಿಗಬಹುದು. ನಮ್ಮ ಪೋಲಿಸ್ ಅಧಿಕಾರಿಗಳು ಆರ್.ಡಿ. ಪಾಟೀಲ್ ಹಿಡಿಯೋದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಪರೀಕ್ಷಾ ಸಮಯದಲ್ಲಿ ತಪಾಸಣೆ ಕೂಡಾ ಮಾಡಿದ್ದೀವಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.