Monday, May 13, 2024

ದೀಪಾವಳಿ ಗಿಫ್ಟ್ : 27.50 ರೂ.ಗೆ ಸಿಗಲಿದೆ ಒಂದು ಕೆಜಿ ಗೋಧಿ ಹಿಟ್ಟು, ಈರುಳ್ಳಿಯೂ ಅಗ್ಗ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನರಿಗೆ ದೀಪಾವಳಿ ಗಿಫ್ಟ್ ನೀಡಿದೆ. ಈ ಮೂಲಕ ಕೇವಲ 27.50 ರೂಪಾಯಿಗೆ ಒಂದು ಕೆಜಿ ಗೋಧಿ ಹಿಟ್ಟು ಜನರ ಕೈ ಸೇರಲಿದೆ.

ಬೇಡಿಕೆ ಹೆಚ್ಚಾದ ಪರಿಣಾಮ ಒಂದು ಕೆಜಿ ಗೋಧಿ ಹಿಟ್ಟನ್ನು 60ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇದನ್ನು ಕೊಳ್ಳಲು ಬಡವರಿಗೆ ಕಷ್ಟ ಎಂಬುವುದನ್ನು ಅರಿತ ಕೇಂದ್ರ ಸರ್ಕಾರ ‘ಭಾರತ್ ಅಟಾ’ ಯೋಜನೆ ಜಾರಿಗೊಳಿಸಿದೆ.

ಈ ಯೋಜನೆಯಡಿ ಒಂದು ಕಿಲೋ ಗೋಧಿ ಹಿಟ್ಟು 27.50 ರೂಪಾಯಿಗೆ ಸಿಗಲಿದ್ದು, 10 ಅಥವಾ 30 ಕಿಲೋ ಬ್ಯಾಗ್ ಖರೀದಿಸಬಹುದಾಗಿದೆ. ಇದಕ್ಕಾಗಿ 800 ಮೊಬೈಲ್ ವ್ಯಾನ್ ಹಾಗೂ 2,000 ಅಂಗಡಿಗಳನ್ನು ತೆರೆಯಲಾಗುತ್ತಿದೆ. ಈ ಯೋಜನೆಯಡಿ 60 ರೂಪಾಯಿಗೆ ಒಂದು ಕಿಲೋ ಕಡಲೆಕಾಳು ಹಾಗೂ 25 ರೂಪಾಯಿಗೆ ಒಂದು ಕಿಲೋ ಈರುಳ್ಳಿ ಕೂಡ ಲಭಿಸಲಿದೆ.

ದೇಶಾದ್ಯಂತ ‘ಭಾರತ್‌ ಅಟ್ಟಾ’

ಒಟ್ಟಾರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ನಿರಾಳ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಿರಂತರ ಪ್ರಯತ್ನ ನಡೆಸುತ್ತಿದೆ. ಇದೀಗ ದೇಶಾದ್ಯಂತ ‘ಭಾರತ್‌ ಅಟ್ಟಾ’ ಗೋಧಿ ಹಿಟ್ಟನ್ನು ಬಿಡುಗಡೆ ಮಾಡಿದೆ.

RELATED ARTICLES

Related Articles

TRENDING ARTICLES