Thursday, January 23, 2025

ಒಂದು ಬಾಲೂ ಆಡದೇ ಟೈಮ್ಡ್ ಔಟ್: ಇತಿಹಾಸ ನಿರ್ಮಿಸಿದ ಮ್ಯಾಥ್ಯೂಸ್!

ದೆಹಲಿ: ಕ್ರೀಸ್​ ಗೆ ಬಂದು ಒಂದು ಎಸೆತವನ್ನು ಎದುರಿಸದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೈಮ್ಡ್ ಔಟ್ ಆಗುವ ಮೂಲಕ ಶ್ರೀಲಂಕ ಕ್ರಿಕೆಟ್​ನ ಹಿರಿಯ ಆಟಗಾರ ಏಂಜಲೋ ಮ್ಯಾಥ್ಯೂಸ್​ ಇತಿಹಾಸ ನಿರ್ಮಿಸಿದ್ದಾರೆ.

ಇಂದು ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ವಿಶ್ವಕಪ್​ ನ 38ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದದ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ಹಿರಿಯ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌ ಟೈಮ್ಡ್‌ ಔಟ್‌ ಆಗಿದ್ದಾರೆ.

ಇದನ್ನೂ ಓದಿ: ಕ್ರೀಡಾ ಇಲಾಖೆ ವತಿಯಿಂದ ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ!

25ನೇ ಓವರ್​ ನಲ್ಲಿ ಕ್ರೀಸ್‌ಗೆ ಬಂದ ಏಂಜೆಲೊ ಮ್ಯಾಥ್ಯೂಸ್‌ ಮೊದಲನೇ ಎಸೆತ ಎದುರಿಸಲು ಸಜ್ಜಾಗುತ್ತಿದ್ದರು. ಆದರೆ, ಈ ವೇಳೆ ಅವರ ಹೆಲ್ಮೆಟ್‌ನಲ್ಲಿ ಸಮಸ್ಯೆ ಇರುವುದನ್ನು ಅರಿತು ಬೇರೆ ಹೆಲ್ಮೆಟ್‌ ಕೊಡುವಂತೆ ಡಗೌಟ್‌ನಲ್ಲಿ ಕುಳಿತಿದ್ದ ಸಹ ಆಟಗಾರರಿಗೆ ಸಿಗ್ನಲ್ ಮಾಡಿದರು.

ಏಂಜೆಲೋ ಮ್ಯಾಥ್ಯೂಸ್ ಅವರ ಹೆಲ್ಮೆಟ್‌ ಬದಲಿಸುವುದಕ್ಕೂ ಮುನ್ನ ಬಾಂಗ್ಲಾದೇಶ ನಾಯಕ ಶಕಿಬ್‌ ಅಲ್ ಹಸನ್ ಅವರು ಈ ಸನ್ನಿವೇಶವನ್ನು ಫೀಲ್ಡ್ ಅಂಪೈರ್‌ಗಳಾದ ಮರೈಸ್ ಎರಾಸ್ಮಸ್ ಹಾಗೂ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ದೂರು ನೀಡಿದರು. ಐಸಿಸಿ ನಿಯಮದ ಪ್ರಕಾರ ಫೀಲ್ಡ್‌ ಅಂಪೈರ್‌ಗಳು ಏಂಜೆಲೊ ಮ್ಯಾಥ್ಯೂಸ್‌ ಅವರಿಗೆ ಟೈಮ್ಡ್‌ ಔಟ್‌ ಘೋಷಿಸಿದರು.

RELATED ARTICLES

Related Articles

TRENDING ARTICLES