ರಾಯಚೂರು: ರಾಜ್ಯದಲ್ಲಿ ಎಲ್ಲೆಲ್ಲೂ ಬರ ತಾಂಡವಾಡುತ್ತಿದೆ. ಬಿಸಿಲ ನಾಡು ರಾಯಚೂರು ಸಹ ಇದರಿಂದ ಹೊರತಾಗಿಲ್ಲ.
ಕಳೆದ 12 ದಿನಗಳಿಂದ ಕುಡಿಯಲು ನೀರಿಗಾಗಿ ರಾಯಚೂರಿನ ಮುರ್ಕಿದೊಡ್ಡಿ ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ಗ್ರಾಮಸ್ಥರು ಹನಿ ನೀರಿಗೂ ಪರದಾಡುತ್ತಿದ್ದಾರೆ.
400 ಕುಟುಂಬಗಳಿರುವ ಇರುವ ಈ ಗ್ರಾಮದಲ್ಲಿ ಚಳಿಗಾಲದಲ್ಲೇ ನೀರಿನ ಸಮಸ್ಯೆ ಶುರುವಾಗಿದ್ದು, ಅಕ್ಷರಶಃ ನೀರಿಗಾಗಿ ತತ್ವಾರ ಇತ್ತು.
ಒಂದು ಬಿಂದಿಗೆ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆಯುವ ಪರಿಸ್ಥಿತಿ ಇದೆ. ಪ್ರತಿನಿತ್ಯ 6 ಟ್ಯಾಂಕರ್ ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಹೇಳಿದ್ದರು. ಆದರೆ, ವಾಸ್ತವವಾಗಿ 4 ಟ್ಯಾಂಕ್ ನೀರು ಕೊಡುತ್ತಿದ್ದರು. ಅದು ಯಾರಿಗೆ ಸಾಲುತ್ತೆ? ಇರುವ ಒಂದು ಬೋರ್ ವೆಲ್ ಕೆಟ್ಟು12 ದಿನಗಳಾಗಿವೆ ಎಂದು ಗ್ರಾಮಸ್ಥರು ಅಳಲುತೊಡಿದ್ದರು.
ಗ್ರಾಮಸ್ಥರು ಫೋನ್ ಮಾಡಿದ್ರೆ ನಿಮಗ್ಯಾಕೆ ಬೇಕು ನೀರು ಅಂತಾರೆ. ಯಾರಿಗೆ ಹೇಳುತ್ತೀರಿ ಹೇಳಿಕೊಳ್ಳಿ ಎಂದು ದರ್ಪ ಮೆರೆಯುತ್ತಿದ್ದರು. ಈ ಕುರಿತು ‘ದಾಹ.. ದಾಹ.. ದಾಹ’ ಶೀರ್ಷಿಕೆಯಡಿ ಪವರ ಟಿವಿ ವರದಿ ಪ್ರಸಾರ ಮಾಡಿತ್ತು.
ಪವರ್ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಅರ್ಧಗಂಟೆಯಲ್ಲೇ ಬೋರ್‌ವೆಲ್ ದುರಸ್ತಿ ಮಾಡಿ ನೀರು ಪೂರೈಕೆ ಮಾಡಿದ್ದಾರೆ. ಪವರ್ ಟಿವಿ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.