Wednesday, January 22, 2025

ಪ್ರಧಾನಿ ಮೋದಿಯವರ ಯಾವ ಪ್ರಯತ್ನವೂ ಈಡೇರಲ್ಲ : ಸಚಿವ ಕೃಷ್ಣಬೈರೇಗೌಡ

ಬಾಗಲಕೋಟೆ : ಸಿಎಂ ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಇರ್ತಾರೆ ಗೊತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಸೇರಿ ರಾಜ್ಯ ಲೂಟಿ ಮಾಡ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ. ನಮ್ಮಲ್ಲಿ ಸಹಮತವಿದೆ, ನಾವೆಲ್ಲರೂ ಒಂದಾಗಿದ್ದೇವೆ. ಇವತ್ತು ಮುಖ್ಯವಾಗಿ ಆಗಬೇಕಿರೋದು ಜನಗಳ ಕಾರ್ಯ. ನಾವು ಜನಗಳ ಕೆಲಸದ ಬಗ್ಗೆ ಗಮನ ಹರಿಸಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಆಪರೇಷನ್ ಮಾಡುತ್ತಾರೆಯೋ? ಇನ್ನೊಂದು​​ ಮಾಡುತ್ತಾರೆಯೋ ಮಾಡಲಿ. ಬಿಜೆಪಿ ಆಪರೇಷನ್ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ರಾಜ್ಯದ ಜನರ ಆಶೀರ್ವಾದ ನಮಗಿದೆ. ಜನರ ಕೆಲಸ, ಕಾರ್ಯ ನಾವು ಮಾಡಬೇಕು. ಪ್ರಧಾನಿ ಮೋದಿಯವರು ಏನಾದ್ರೂ ಹೇಳಲಿ, ನಾವು ನಮ್ಮ ಜನರ ಕೆಲಸ ನಾವು ಮಾಡ್ತೇವೆ. ಬಿಜೆಪಿಯವರು ಅಂಬಾನಿ ಹಾಗೂ ಅದಾನಿ ಅಂತವರಿಗೆ ಅನುಕೂಲ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮೋದಿ ಕಿಡಿಗೇಡಿ ಮಾತುಗಳನ್ನ ಆಡ್ತಿದ್ದಾರೆ

ನಾವು ನಮ್ಮ ರಾಜ್ಯದ ಸಾಮಾನ್ಯ ಜನ ಅಂಬಣ್ಣ, ತಿಮ್ಮಣ್ಣನಿಗೆ ಗ್ಯಾರಂಟಿ ಕೊಟ್ಟು ಸಹಾಯ ಮಾಡಿದ್ದಿವಿ. ನಮ್ಮ ಅಭಿವೃದ್ಧಿ ಕಾರ್ಯ ಸಹಿಸಲಿಕ್ಕೆ ಆಗದೆ ಮೋದಿ ಕಿಡಿಗೇಡಿ ಮಾತುಗಳನ್ನ ಆಡ್ತಿದ್ದಾರೆ. ನಾವು ದೃತಿಕೆಡುವುದಿಲ್ಲ, ನಮ್ಮ ಲಕ್ಷ್ಯ ಬೇರೆಕಡೆ ಹೊಗಲ್ಲ. ದುಡಿಯಿವ ವರ್ಗದ ಜನರ ಮೇಲೆ ಯಾರು ಹೆಜ್ಜೆ ಈಡಬಾರದು. ದುಡಿಯೋ ವರ್ಗದ ಜನರ ಪರವಾಗಿ ಕೆಲಸ ಮಾಡೋದು ನಮ್ಮ ಕೆಲಸ. ನಮ್ಮ ಸರ್ಕಾರದ ಬಡಜನರ ಪರ ಕಾರ್ಯ ಸಹಿಸದೆ ಸರ್ಕಾರ ಕಿತ್ತಾಕೋ ಪ್ರಯತ್ನ ಬಿಜೆಪಿ ಮಾಡ್ತಿದೆ. ಬಡವರ ಕೆಲಸ ಮಾಡ್ತಿದ್ದಿ, ಬಡವರ ಆಶೀರ್ವಾದ ನಮ್ಮನ್ನ ಕೈ ಹಿಡಿಯುತ್ತೆ ಎಂಬ ವಿಶ್ವಾಸ ನನಗಿದೆ ಎಂದು ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES