Wednesday, January 22, 2025

ಡಿಕೆಶಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದರೆ ಎಲ್ಲಾ ಶಾಸಕರನ್ನೂ ಕಳಿಸುತ್ತೇನೆ : ಹೆಚ್.ಡಿ ಕುಮಾರಸ್ವಾಮಿ

ರಾಮನಗರ : ಡಿಸಿಎಂ ಡಿ.ಕೆ.ಶಿವಕುಮಾರ್​ ನಾಳೆ ಸಿಎಂ ಆಗುವುದಾದರೆ ಜೆಡಿಎಸ್​ನ 19 ​​ಶಾಸಕರ ಬೆಂಬಲ ಇದೆ ಎಂದು ಹೇಳಿರುವುದು ವ್ಯಂಗ್ಯವಾಗಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಹೇಳಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಶಿವಕುಮಾರ್ ಸಿಎಂ ಆಗುತ್ತಾರಾ? ಇಲ್ಲವಾ? ಅಂತಾ ಕಾಂಗ್ರೆಸ್​ನವರು ಹೇಳಬೇಕು ಎಂದು ತಿಳಿಸಿದರು.

ಪ್ರತಿ ದಿನ ನೀವು ಬನ್ನಿ, ನೀವು ಬನ್ನಿ ಅಂತಾ ಎಲ್ಲರನ್ನೂ ಕರೆಯುತ್ತಿದ್ದಾರೆ. ನಿನ್ನೆ ಸಿಎಂ ಕನಿಷ್ಠ 50 ಜನರನ್ನಾದರೂ ಕರೆ ತರಬೇಕು ಎಂದಿದ್ದಾರೆ. ಪ್ರತಿನಿತ್ಯ ನಮ್ಮ ಶಾಸಕರ ಮನೆ ಮುಂದೆ ಯಾಕೆ ಹೋಗುತ್ತಿದ್ದೀರಾ? ಒಳ್ಳೆಯ ಕೆಲಸ ಮಾಡುತ್ತೇನೆ ಅಂದರೆ ಎಲ್ಲರನ್ನೂ ಕಳಿಸುತ್ತೇನೆ ಎಂದಿದ್ದೇನೆ. ಆದರೆ, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರಾ? ಇಲ್ಲವಾ? ಅಂತ ಮೊದಲು ಕಾಂಗ್ರೆಸ್ ನಾಯಕರು ಹೇಳಬೇಕು ಎಂದು ಚಾಟಿ ಬೀಸಿದರು.

ನಿರ್ಮಲಾನಂದ ನಾಥ ಶ್ರೀಗಳ ಭೇಟಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ರಾಮನಗರ ಶಾಖಾ ಮಠದಲ್ಲಿ ಇಂದು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದರು. ಈ ವೇಳೆ ಶ್ರೀಗಳ ಜತೆಯಲ್ಲಿ ಜಾತಿಗಣತಿಯ ಸಾಧಕ ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

RELATED ARTICLES

Related Articles

TRENDING ARTICLES