Tuesday, September 17, 2024

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ : ಇಬ್ಬರು ಶಂಕಿತರ ವಿಚಾರಣೆ

ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಇಬ್ಬರು ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ. ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬ್ಬಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಲವು ದಿನಗಳ ಹಿಂದೆ ತಿಪಟೂರು ಪಟ್ಟಣಕ್ಕೆ ಬಂದಿದ್ದ ಶಂಕಿತ ನಸ್ರುಲ್ಲಾ, ನವೆಂಬರ್​ 3 ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ತೆರಳಿದ್ದ. ಬಳಿಕ ನಸ್ರುಲ್ಲಾ ಹಾಗೂ ಜಬ್ಬಿ ಇಬ್ಬರೂ ಸೇರಿಕೊಂಡು ಬಿಳಿ ಬಣ್ಣದ ವಸ್ತುವನ್ನು ಖರೀದಿಸಿದ್ದರು.

ಇದನ್ನೂ ಓದಿ: ಕಿಂಗ್ ಕೊಹ್ಲಿ ಖಾತೆಗೆ ಮತ್ತೊಂದು ದಾಖಲೆ : ಕುಮಾರ ಸಂಗಕ್ಕಾರ ದಾಖಲೆ ಉಡೀಸ್

4 ರಿಂದ 5 ಕೋಟಿರೂಪಾಯಿ ವ್ಯವಹಾರ ಇದೆ ಎಂದು ನಿನ್ನೆ ನಸ್ರುಲ್ಲಾನ ಕಾರಿನಲ್ಲೇ ಇಬ್ಬರು ತೆರಳಿದ್ದರಂತೆ. ಸದ್ಯ ತಿಪಟೂರಿನ ನಿಗೂಢ ಸ್ಥಳದಲ್ಲಿ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಬಿಳಿ ಬಣ್ಣದ ಪುಡಿಯಾಕಾರದ ವಸ್ತು ಇದ್ದು, ಸಲ್ಫರ್ ಎಂದು ಅನುಮಾನಿಸಲಾಗುತ್ತಿದೆ. ಸಲ್ಫರ್​ನ್ನು ಕ್ರಿಮಿನಾಶಕ, ಕಳೆನಾಶಕ ಅಥವಾ ಬಾಂಬ್ ತಯಾರಿಕೆಗೆ ಬಳಸಲಾಗುತ್ತದೆ.

ಘಟನೆ ವಿವರ

ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್​​ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ  ಆಗಿತ್ತು. ಜೊತೆಗೆ ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ​​ ಶುಗರ್ಸ್ ಎಂದು ಬರೆಯಲಾಗಿತ್ತು. ನಿನ್ನೆಯಿಂದಲೂ ಪಾರ್ಕಿಂಗ್ ಲಾಟ್​​ನಲ್ಲೇ ಈ ಬಾಕ್ಸ್​ಗಳಿದ್ದು, ಕೂಡಲೇ ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತಿದೆ. ಬಾಕ್ಸ್​​ ಬಳಿ ಯಾರೂ ತೆರಳದಂತೆ ಪೊಲೀಸರು ಬ್ಯಾರಿಕೇಡ್​​ ಹಾಕಿದ್ದರು. ಈ ಬಾಕ್ಸ್ ಯಾರದ್ದು? ಯಾಕೆ ಇಲ್ಲಿದೆ ಎಂಬುದು ಇನ್ನು ತಿಳಿದು ಬಂದಿರಲಿಲ್ಲ. ಇದೀಗ ಇಬ್ಬರು ಶಂಕಿತರು ಸಿಕ್ಕಿಬಿದ್ದಿದ್ದು, ವಿಚಾರಣೆ ಬಳಿಕವೇ ಸತ್ಯಾಸತ್ಯತೆ ತಿಳಿಯಲಿದೆ.

 

 

RELATED ARTICLES

Related Articles

TRENDING ARTICLES