Sunday, December 22, 2024

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಅಪ್ರಾಪ್ತ ಬಾಲಕ

ಚಿತ್ರದುರ್ಗ : ಅಪ್ರಾಪ್ತ ಬಾಲಕ ಮತಾಂತರಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ನಡೆದಿದೆ.

17 ವರ್ಷದ ಬಾಲಕ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಕಳೆದ ಆರು ತಿಂಗಳಿಂದ ಬಾಲಕನ ನಡವಳಿಕೆ ಗಮನಿಸಿದ ಪೋಷಕರಿಗೆ ಅನುಮಾನ ಉಂಟಾಗಿದ್ದು, ಆತನ ಮೊಬೈಲ್ ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಅದೇ ಗ್ರಾಮದ ಅಬ್ಬಾಸ್ ಹಾಗೂ ಆತನ ತಂದೆ ಗರೀಬ್ ಎಂಬಾತ ನನ್ನ ಮಗನ ತಲೆಕೆಡಿಸಿ ಮತಾಂತರಗೊಳಿಸಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಇನ್ನು, ಬಾಲಕನ ಮೊಬೈಲ್‌ನಲ್ಲಿ ಡ್ರಗ್ಸ್, ಗಾಂಜಾ ವಿಷಯದ ಸಂಭಾಷಣೆ ದೊರಕಿದ್ದು, ಡ್ರಗ್ಸ್ ನೀಡಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಪರುಶುರಾಂಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ಎಫ್​ಐಆರ್ (FIR) ದಾಖಲಿಸಿದ್ದಾರೆ.

ಇನ್ನೂ, ಪೊಲೀಸರು ಮತಾಂತರ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ ಮಾಡಿದೆ.

RELATED ARTICLES

Related Articles

TRENDING ARTICLES