Monday, December 23, 2024

ಇಸ್ರೇಲ್- ಹಮಾಸ್ ಕೃತ್ಯಕ್ಕೆ ಬರಾಕ್ ಒಬಾಮಾ ಖಂಡನೆ

ಬೆಂಗಳೂರು : ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಎರಡೂ ಕಡೆಗಳಿಂದ ನಡೆಯುತ್ತಿರುವ ಹಿಂಸಾಚಾರದ ಕೃತ್ಯಗಳನ್ನು ಸಮಾನವಾಗಿ ಖಂಡಿಸಿದ್ದಾರೆ.

ತಮ್ಮ ಮಾಜಿ ಸಿಬ್ಬಂದಿ ‘Pod Save America’ ಸಂಸ್ಥೆಗಾಗಿ ನಡೆಸಿದ ಪಾಡ್​ಕಾಸ್ಟ್​ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ – ಹಮಾಸ್ ಸಮಸ್ಯೆ ನೂರು ವರ್ಷ ಹಳೆಯದಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳು ಈ ಬೆಂಕಿಗೆ ತುಪ್ಪ ಸುರಿಯುತ್ತಿವೆ ಮತ್ತು ದ್ವೇಷ ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ.

ಈ ವಿಷಯದಲ್ಲಿ ನಾನು ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಈ ಸಮಸ್ಯೆಯ ನಿವಾರಣೆಗೆ ನಾನು ಮತ್ತೇನು ಮಾಡಬಹುದಿತ್ತು ಎಂದು ಪ್ರಶ್ನಿಸಿಕೊಳ್ಳುತ್ತೇನೆ. ನಾನು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದು ನಿಜವಾದರೂ, ಅವುಗಳೆಲ್ಲದರ ಹೊರತಾಗಿ ನಾನು ಮತ್ತೇನೋ ಮಾಡಬಹುದಿತ್ತಾ ಎಂದು ನನ್ನ ಮನಸ್ಸು ನನಗೆ ಕೇಳುತ್ತಿರುತ್ತದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES