Wednesday, January 22, 2025

ಹುಟ್ಟುಹಬ್ಬದ ದಿನವೇ ಕೊಹ್ಲಿ ಭರ್ಜರಿ ಶತಕ.. ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್!

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದ್ದಾರೆ. ಈ ಮೂಲಕ ಹುಟ್ಟುಹಬ್ಬದ ದಿನವೇ ತಮ್ಮ ಅಭಿಮಾನಿಗಳಿಗೆ ಬೊಂಬಾಟ್ ಗಿಫ್ಟ್​ ನೀಡಿದ್ದಾರೆ.

ಕೊಲ್ಕತ್ತಾದ ಈಡನ್​ ಗಾರ್ಡನ್​​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಭಾರತದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ, ಶತಕ ಸಿಡಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 79ನೇ ಶತಕ ಸಿಡಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 199 ಎಸೆತಗಳಲ್ಲಿ 10 ಬೊಂಬಾಟ್ ಬೌಂಡರಿಗಳ ನೆರವಿನೊಂದಿಗೆ ಶತಕ ಸಿಡಿಸಿದರು. ಸಚಿನ್‌ ತೆಂಡೂಲ್ಕರ್‌ 463 ಪಂದ್ಯಗಳ 452 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ವಿರಾಟ್ ಕೊಹ್ಲಿ 289 ಪಂದ್ಯಗಳ 277 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

ಏಕದಿನ ಕ್ರಿಕೆಟ್​ನಲ್ಲಿ ಸಚಿನ್‌ ತೆಂಡೂಲ್ಕರ್‌ 44.83 ಸರಾಸರಿಯಲ್ಲಿ 18,426 ರನ್‌ ಹೊಡೆದರೆ ವಿರಾಟ್ ಕೊಹ್ಲಿ 58.48 ಸರಾಸರಿಯಲ್ಲಿ 13,625 ರನ್‌ ಹೊಡೆದಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 29 ಶತಕ, ಏಕದಿನ ಕ್ರಿಕೆಟ್​ನಲ್ಲಿ 49 ಶತಕ, ಟಿ-20 ಕ್ರಿಕೆಟ್​ನಲ್ಲಿ 1 ಶತಕ ಹಾಗೂ ಐಪಿಎಲ್​ನಲ್ಲಿ 7 ಶತಕ ಸಿಡಿಸಿದ್ದಾರೆ.

ವಿಶ್ವಕಪ್​ನಲ್ಲಿ 1,500 ರನ್​

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದರು. ವಿಶ್ವಕಪ್​ನಲ್ಲಿ 1,500 ರನ್​ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇದೇ ಸಾಧನೆ ಮಾಡಿದ್ದರು. ಇದೀಗೆ ವಿರಾಟ್ ಕೊಹ್ಲಿ ಈ ಗೌರವಕ್ಕೆ ಪಾತ್ರರಾದ ಎರಡನೇ ಭಾರತೀಯ ಬ್ಯಾಟರ್​ ಎನಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES