Sunday, December 22, 2024

ಕೇಂದ್ರದಿಂದ ಬರ ಪರಿಹಾರಕ್ಕೆ ಹಣ ತರುವ ಪ್ರಯತ್ನ ಮಾಡಿ : ಸಚಿವ ಆರ್. ಬಿ ತಿಮ್ಮಾಪೂರ

ಬಾಗಲಕೋಟೆ : ಕೇಂದ್ರದಿಂದ ಬರ ಪರಿಹಾರಕ್ಕೆ ಹಣ ತರುವ ಪ್ರಯತ್ನವನ್ನು ಮೊದಲು ಮಾಡಿ ಎಂದು ಅಬಕಾರಿ ಸಚಿವ ಆರ್. ಬಿ ತಿಮ್ಮಾಪೂರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್​ಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ಈಶ್ವರಪ್ಪ ಸವಕಲು ನಾಣ್ಯ, ಈ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ : ಸಿದ್ದರಾಮಯ್ಯ

ಬರ ಪರಿಹಾರಕ್ಕೆ ಹಣ ತನ್ನಿ 

ಗಲ್ಲಿ ಗಲ್ಲಿ ಸಂಚಾರ ಮಾಡುವುದನ್ನು ಬಿಟ್ಟ ನೀವು ದೆಹಲಿಗೆ ಹೋಗಿ ಹಣ ತಗೆದುಕೊಂಡು ಬನ್ನಿ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಯಲ್ಲಿ ಮಾತ್ರ ಕಚ್ಚಾಟ ಇರೋದು

ನಮ್ಮ ಸರ್ಕಾರ ಭದ್ರವಾಗಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ಬಂದಿದೆ, ಆಗ ಐದು ವರ್ಷ ಸರ್ಕಾರ ನಡೆದಿದೆ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರ ಬಿದ್ದಿಲ್ಲ, ಬೀಳುವುದು ಇಲ್ಲ. ಬಿಜೆಪಿಯಲ್ಲಿ ಮಾತ್ರ ಕಚ್ಚಾಟ ಇರೋದು ಎಂದು ತಿರುಗೇಟು ನೀಡಿದರು.

ನೈತಿಕತೆ ಇದ್ಯಾ..? 

ರಾಜ್ಯಕ್ಕೆ ಕೇಂದ್ರದಿಂದ ಕೊಡಬೇಕಿರುವ ಹಣವೇ ಬರುತ್ತಿಲ್ಲ. ಇನ್ನು ಹೆಚ್ಚಿನ ಹಣ ಏನು ಕೊಡುತ್ತಾರೆ. ಇವರಿಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

 

RELATED ARTICLES

Related Articles

TRENDING ARTICLES