Wednesday, January 22, 2025

KPSC ಎಕ್ಸಾಂನಲ್ಲಿ ಮಾಂಗಲ್ಯ ಸರ ತೆಗೆಸಿದ ಸಿಬ್ಬಂದಿ

ಕಲಬುರಗಿ: KPSC ಗ್ರೂಪ್ C ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಯಡವಟ್ಟು ಮಾಡಿಕೊಂಡಿದೆ.ಅಕ್ರಮ ತಡೆಯೋದಕ್ಕೆಂದು ಕತ್ತಲ್ಲಿದ್ದ ಮಹಿಳೆಯರ ತಾಳಿ, ಕಾಲುಂಗುರ ತೆಗೆಸಿ ಪರೀಕ್ಷೆ ಹಾಲ್​​ಗೆ ಕಳುಹಿಸಿದ್ದಾರೆ.

ಈ ಘಟನೆ ಕಲಬುರಗಿ ನಗರದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜ್ ನಲ್ಲಿ ನಡೆದಿದೆ. ಕತ್ತಲ್ಲಿದ್ದ ತಾಳಿ ತೆಗೆಯಲು ಹಿಂದೆಟು ಹಾಕಿದಕ್ಕೆ ಎಕ್ಸಾಂ ಅಟೆಂಡ್ ಮಾಡಲು ಸಿಬ್ಬಂದಿಗಳು ಬಿಟ್ಟಿಲ್ಲ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ: ಕುಟುಂಬಗಳ ನಡುವೆ ಮಾರಮಾರಿ!

ಎಕ್ಸಾಂ ಹೊರಗಡೆ ನಿಂತಿದ್ದ ಸಂಬಂಧಿಕರ ಕೈಗೆ ತಾಳಿ ಕೊಟ್ಟು ನಂತರ ಪರೀಕ್ಷಾ ಹಾಲ್​​​ಗೆ ಅಭ್ಯರ್ಥಿಗಳು ತೆರಳಿದ್ದಾರೆ.

 

RELATED ARTICLES

Related Articles

TRENDING ARTICLES