Thursday, December 26, 2024

ಪ್ರತಿಮಾ ಕೊಲೆ : ಎಲ್ಲಾ ಅಧಿಕಾರಿಗಳಿಗೂ ಭದ್ರತೆ ಕೊಡೋಕೆ ಆಗುತ್ತಾ?: ಸಚಿವ ಮಲ್ಲಿಕಾರ್ಜುನ್

ದಾವಣಗೆರೆ : ಪ್ರತಿಯೊಬ್ಬ ಅಧಿಕಾರಿಗಳಿಗೂ ಭದ್ರತೆ ಕೊಡೋಕೆ ಆಗುತ್ತಾ? ಆಂತರಿಕವಾಗಿ ಏನಿತ್ತೋ ಏನೋ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ S.S.ಮಲ್ಲಿಕಾರ್ಜುನ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾರ ಫ್ಯಾಮಿಲಿಯಲ್ಲಿ ಪ್ರಾಬ್ಲಮ್​​ ಇತ್ತು ಎಂದು ತಿಳಿದು ಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಬ್ರೇಕ್​ ಹಾಕಿದ್ದೇ ಕೊಲೆಗೆ ಕಾರಣ ಅನ್ನೋ ಆರೋಪ ಸಹ ಕೇಳಿ ಬಂದಿದೆ. ಯಾರ್ಯಾರು ಅವರ ಸಂಪರ್ಕದಲ್ಲಿದ್ರು ಎನ್ನುವ ಬಗ್ಗೆ ತನಿಖೆ ಆಗ್ತಿದೆ. ಸಂಪೂರ್ಣ ತನಿಖೆ ಆದ ಮೇಲೆ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಇನ್ನು ಪ್ರತಿಮಾ ಒಳ್ಳೆಯ ಆಫೀಸರ್​. ನಿನ್ನೆ ವಿಡಿಯೋ ಕಾನ್ಫರೆನ್ಸ್​​​ ಮೂಲಕ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿಮಾ ಕೊಲೆ ಬಗ್ಗೆ ಸಿಎಂ ಏನದಂದ್ರು?

ಗಣಿ ಅಧಿಕಾರಿ ಪ್ರತಿಮಾ ಕೊಲೆ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈಗ ತಾನೇ ಇದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಧಿಕಾರಿ ಒಬ್ಬಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಪತಿ ಊರಿನಲ್ಲಿ ಇದ್ದರು. ಸದ್ಯಕ್ಕೆ ಇದು ಆರಂಭಿಕ ಮಾಹಿತಿ. ಕೊಲೆಯ ಬಗ್ಗೆ ಸಂಪೂರ್ಣವಾದ ತನಿಕೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES