Wednesday, January 22, 2025

ಡಿ.19ರಂದು ದುಬೈನಲ್ಲಿ ಐಪಿಎಲ್ ಹರಾಜು!

ಮುಂಬೈ: 2024ರ ಐಪಿಎಲ್‌ ನ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.

ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ ಹರಾಜು ಭಾರತದ ಹೊರಗಡೆ ನಡೆಯಲಿದೆ. ಪ್ರತಿ ಫ್ರಾಂಚೈಸಿಗೆ ಆಟಗಾರರ ರೀಟೈನ್‌ ಪಟ್ಟಿ ಸಲ್ಲಿಕೆಗೆ ನವೆಂಬರ್ 26ರ ಗಡುವು ನೀಡಲಾಗಿದೆ. ಈ ಮೊದಲು ನವೆಂಬರ್ 15ಕ್ಕೂ ಮುನ್ನ ಫ್ರಾಂಚೈಸಿಗಳಿಗೆ ರೀಟೈನ್ ಆಟಗಾರರ ಪಟ್ಟಿ ಸಲ್ಲಿಸುವಂತೆ ಬಿಸಿಸಿಐ ಗಡುವು ನೀಡಿದೆ.

ಇದನ್ನೂ ಓದಿ: 35ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ!

ಇದೀಗ ಆ ದಿನಾಂಕವನ್ನು ಬಿಸಿಸಿಐ ಪರಿಷ್ಕರಿಸಿದೆ. ಪ್ರತಿ ಫ್ರಾಂಚೈಸಿಯು ಈ ಬಾರಿ ಆಟಗಾರರ ಹರಾಜಿನಲ್ಲಿ ಗರಿಷ್ಠ 100 ಕೋಟಿ ರುಪಾಯಿ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಮಿನಿ ಹರಾಜಾಗಿದ್ದು, ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ.

RELATED ARTICLES

Related Articles

TRENDING ARTICLES