Wednesday, January 22, 2025

ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು : ಆತಂಕಗೊಂಡ ಬಳ್ಳಾರಿ ಜನತೆ

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ 3ನೇ ವಾರ್ಡಿನ ಕೆಲವು ಏರಿಯಾಗಳಲ್ಲಿ ನಲ್ಲಿಗಳಲ್ಲಿ ರಕ್ತದ ಮಾದರಿಯ ನೀರು ಬಂದಿದ್ದು, ಜನರು ಆತಂಕಕ್ಕೆ ಕಾರಣವಾಗಿದೆ.

ಜಾಮಿಯಾ ಮಸೀದಿ ಹತ್ತಿರದ ಕಮಾಲ್ ಸಾಬ್ ಓಣಿ, ವಲಿಪೀರ್ ಸಾಬ್‌ ಅವರ ಓಣಿಯ ಕೆಲವು ನಲ್ಲಿಯಲ್ಲಿ ಏಕಾಏಕಿ ರಕ್ತ ಮಾದರಿಯ ನೀರು ಬಂದಿದೆ. ತಕ್ಷಣವೇ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಪಂಚಾಯಿತಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಸ್ಥಳೀಯರು ನೀರು ಬಿಟ್ಟ ಸಂದರ್ಭದಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ನೀರು ಬಳಕೆಗೆ ಯೋಗ್ಯವೋ ಅಲ್ಲವೋ ಎಂಬ ಬಗ್ಗೆ ತಿಳಿಸಿಲ್ಲ. ಈ ನೀರು ಏನು ಮಾಡಬೇಕು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿಕಾವೇರಿ’ ಹೋರಾಟ

ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರಿದಿದ್ದು, ಇಂದೂ ಸಹ ಪ್ರತಿಭಟನೆ ನಡೆಸಿದರು. ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಜೈನ್ ಸಮಾಜ ಸಾಥ್​​ ನೀಡಿದೆ. ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES