Monday, December 23, 2024

ರಾಹುಲ್ ಗಾಂಧಿ ನಾಯಕತ್ವದ ಮುಂದೆ ಬಿಜೆಪಿ ವೀಕ್ : ಸಚಿವ ಎನ್.ಎಸ್. ಬೋಸರಾಜು

ರಾಯಚೂರು: ರಾಹುಲ್ ಗಾಂಧಿ ನಾಯಕತ್ವದ ಮುಂದೆ ಬಿಜೆಪಿ ವೀಕ್ ಆಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಬಿಜೆಪಿಯವ್ರು ಸಂಪೂರ್ಣ ವಿಫಲರಾಗಿದ್ದಾರೆ. ಪ್ರದಾನಿ ಮೋದಿಯವರು ರಾಜ್ಯದಲ್ಲಿ ಕಾಂಗ್ರೆಸ್ ದಿವಾಳಿ ಆಗುತ್ತೆ ಎಂದಿದ್ದರು. ಆದ್ರೆ ಇದೀಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನ ಫಾಲೋ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್ ಪಕ್ಷದಲ್ಲಿ ಯಾರು ಯಾವಾಗ ಬರುತ್ತಾರೆ ಹೋಗುತ್ತಾರೋ ಅವರಿಗೆ ಗೊತ್ತಿಲ್ಲ.ಬಿಜೆಪಿ-ಜೆಡಿಎಸ್ ಪ್ರತಿನಿತ್ಯ ಏನಾದರೂ ಒಂದು ಮಾತನಾಡಿ ಜನರನ್ನ ಕನ್ಪ್ಯೂಸ್ ಮಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಜನರ ಒಳಿತಿಗಾಗಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು: ಶಾಸಕ ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ಪಕ್ಷದಲ್ಲಿ ಮಿಸ್ ಅಂಡರ್ಸ್ಟ್ಯಾಂಡಿಂಗ್ ಕನ್ಫ್ಯೂಷನ್ ಯಾವುದು ಇಲ್ಲ.ರಾಜಕೀಯದಲ್ಲಿ ಕನ್ಫ್ಯೂಷನ್ ಕ್ರಿಯೇಟ್ ಮಾಡುವುದು ಸಹಜ ಎಂದು ಕಿಡಿಕಾರಿದ್ದಾರೆ.

 

 

 

RELATED ARTICLES

Related Articles

TRENDING ARTICLES