Monday, December 23, 2024

ಕಿಂಗ್ ಕೊಹ್ಲಿ ಶತಕ : ದಕ್ಷಿಣ ಆಫ್ರಿಕಾಗೆ ಬೃಹತ್ ಟಾರ್ಗೆಟ್ ನೀಡಿದ ಭಾರತ

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಭಾರತ ಬೃಹತ್ ಟಾರ್ಗೆಟ್ ಕಲೆಹಾಕಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬೊಂಬಾಟ್ ಆರಂಭ ನೀಡಿದರು.

ರೋಹಿತ್ ಶರ್ಮಾ, ಗಿಲ್ ನಿರ್ಗಮನದ ಬಳಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ದಕ್ಷಿಣ ಆಫ್ರಿಕಾ ಬೌಲರ್​ಗಳನ್ನು ಬೆಂಡೆತ್ತಿದರು. ಕೊನೆಯ ಓವರ್​ಗಳಲ್ಲಿ ರವೀಂದ್ರ ಜಡೇಜಾ ಅಬ್ಬರಿಸಿದರು. ಈ ಮೂಲಕ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್​ ಗಳಿಸಿತು.

ಭಾರತದ ಪರ ವಿರಾಟ್ ಕೊಹ್ಲಿ ಅಜೇಯ 101* (ಶತಕ), ಶ್ರೇಯಸ್ ಅಯ್ಯರ್ 7, ರೋಹಿತ್ ಶರ್ಮಾ 40, ಶುಭ್​ಮನ್ ಗಿಲ್ 23, ಸೂರ್ಯಕುಮಾರ್ ಯಾದವ್ 22 ಹಾಗೂ ರವೀಂದ್ರ ಜಡೇಜಾ ಅಜೇಯ 29* ರನ್​ ಸಿಡಿಸಿದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ, ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, , ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES