Wednesday, January 22, 2025

ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮನನೊಂದು ಆತ್ಮಹತ್ಯೆ!

ಬಾಗಲಕೋಟೆ: ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮನ ನೊಂದು ಸಬ್ ಕಾಂಟ್ರ್ಯಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಹೊಸೂರು ಟೋಲ್ ನಾಕಾ ಬಳಿ ನಡೆದಿದೆ.

ವಾರೆಪ್ಪ ಪೂಜಾರ ಮೃತ ದುರ್ದೈವಿಯಾಗಿದ್ದು, ಟೋಲ್ ನಾಕಾ ಹೆದ್ದಾರಿಯ ಕೆಲಸಗಳಿಗೆ ಕೂಲಿ ಕಾರ್ಮಿಕರನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಕೂಲಿ ಕಾರ್ಮಿಕರ ಬಳಿ ಗಾರ್ಡನ್ ನಿರ್ವಹಣೆ, ಗಿಡಗಳಿಗೆ ‌ನೀರು ಹಾಕೋದು, ಸ್ವಚ್ಚತಾ ಕಾಮಗಾರಿ ಕೆಲಸವನ್ನ ವಾರೆಪ್ಪ ಪೂಜಾರ ಮಾಡಿಸುತ್ತಿದ್ದ.

ಇದನ್ನೂ ಓದಿ: 17 ವರ್ಷದ ಬಾಲಕನ ಭೀಕರ ಕೊಲೆ

ಕೆಲಸದಿಂದ ತೆಗೆದ ಕಾರಣ ಮನನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES