ಬೆಂಗಳೂರು: ನಾನೇ ಸಿಎಂ ಎನ್ನುವ ದೌರ್ಭಾಗ್ಯ ಸಿದ್ದರಾಮಯ್ಯಗೆ ಬರಬಾರದಿತ್ತು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆಂದು ಸಿದ್ಧರಾಮಯ್ಯ ಹೇಳಿಕೆ ನೀಡಿದ ದಿನದಿಂದಲೇ ಕಾಂಗ್ರೆಸ್ ಸರ್ಕಾರದ ಅವನತಿ ಅಧಿಕೃತವಾಗಿ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದರೇ ನಾನೆ ಸಿಎಂ: ಸಚಿವ ಪ್ರಿಯಾಂಕ್ ಖರ್ಗೆ!
ಇನ್ನೂ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯೋಕೆ ಆಗೋಲ್ಲ.ಇದು ನಾನು ಹೇಳ್ತಿಲ್ಲ ಕಾಂಗ್ರೆಸ್ ಶಾಸಕರೇ ಹೇಳ್ತ ಇದಾರೆ.ಸಿದ್ದರಾಮಯ್ಯ ಗುಂಪು ಒಂದು ಕಡೆ ಡಿಕೆಶಿ ಗುಂಪು ಒಂದು ಕಡೆ.ಅಧಿಕಾರಕ್ಕಾಗಿ ಅವರ ಬಡಿದಾಟ ರಾಜ್ಯಕ್ಕೆ ಏನು ಮಾಡಬೇಕು ಅನ್ನೋದು ಅವರ ಗಮನಕ್ಕೆ ಇಲ್ಲ.ಸಿಎಂ ಖುರ್ಚಿ ಉಳಿಸಿಕೊಳ್ಳಬೇಕು ಅನ್ನೋದೇ ಒಂದೇ ಸಿದ್ದರಾಮಯ್ಯ ಗುರಿ.ಈ ಸರ್ಕಾರ ಯಾರಿಗೂ ಏನೂ ಮಾಡಿಲ್ಲ.ಸಂಪುಟ ಸಚಿವರು ಕೂಡ ಬರಗಾಲ ಪ್ರದೇಶಕ್ಕೆ ಯಾರು ಹೋಗಿಲ್ಲ ಎಂದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಹಿರಂಗ ಹೇಳಿಕೆ ಕೊಡದಂತೆ ಕಾಂಗ್ರೆಸ್ ನಾಯಕರು ಸೂಚಿಸಿದ್ದರು. ಅವರು ಬಂದು ಹಫ್ತಾ ವಸೂಲಿ ಮಾಡಿಕೊಂಡು ಹೋದರು. ಮರುದಿನವೇ ಅಸಮಾಧಾನ ಸ್ಫೋಟವಾಗಿದೆ. ಇದು ಆರ್ಥಿಕವಾಗಿ ಪಾಪರ್ ಆಗಿರುವ ಸರ್ಕಾರ. ಸಿಎಂ ಗೌರವಯುತವಾಗಿ ರಾಜೀನಾಮೆ ಕೊಡುವುದು ಒಳ್ಳೆಯದು. ಇಲ್ಲದಿದ್ದರೆ ಮಂತ್ರಿಗಳು, ಶಾಸಕರೇ ಸರ್ಕಾರ ಬೀಳಿಸುತ್ತಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.