Monday, November 4, 2024

ವೈದ್ಯರ ನಿರ್ಲಕ್ಷ್ಯ : ಹೆರಿಗೆಗಾಗಿ ಬಂದಿದ್ದ ತಾಯಿ ಮತ್ತು ಮಗು ಸಾವು

ಕೊಪ್ಪಳ : ಗರ್ಭಿಣಿ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದರೂ ಆಪರೇಷನ್ ಮಾಡದೇ ವೈದ್ಯರು ನಿರ್ಲಕ್ಷ್ಯ ಮಾಡಿದ್ದು, ತಾಯಿ ಹಾಗೂ ಮಗು ಉಸಿರು ಚೆಲ್ಲಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಬಿಕಾ ಮೃತ ದುರ್ದೈವಿ. ಈಕೆಯನ್ನು ಹೆರಿಗೆಗಾಗಿ ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತ ಅಂಬಿಕಾಗೆ ಮೂರು ಮಕ್ಕಳಿದ್ದು, ಮೂರು ಹೆರಿಗೆಗಳು ಸಹ ನಾರ್ಮಲ್ ಡೆಲಿವರಿ ಆಗಿತ್ತು. ಆದರೆ, ನಾಲ್ಕನೇ ಹೆರಿಗೆಯೂ ಸಹ ನಾರ್ಮಲ್​ ಡೆಲಿವರಿ ಆಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮಗು ಹೊಟ್ಟೆಯಲ್ಲಿ ಸಾವನಪ್ಪಿದೆಯಂತೆ. ನಾರ್ಮಲ್​ ಡೆಲಿವರಿ ಆಗದೇ ಇದ್ದಾಗ ಸಿಜೇರಿಯನ್​ ಮಾಡಲು ಸಹ ವೈದ್ಯರು ಮುಂದಾಗಿಲ್ಲ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೂರು ಮಕ್ಕಳು ಅನಾಥ

ಮೃತ ಅಂಬಿಕಾ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂಬಿಕಾ ಸಾವಿನಿಂದ ಪತಿ ದಿಕ್ಕು ತೋಚದಂತಾಗಿದ್ದಾರೆ, ತಾಯಿಯನ್ನು ಕಳೆದುಕೊಂಡಿರುವ ಮೂರು ಮಕ್ಕಳು ಅನಾಥರಾಗಿದ್ದಾರೆ. ಇನ್ನೂ, ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳುವಂತೆ ಮೃತಳ ಕುಟುಂಬ್ಥರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES