Wednesday, January 22, 2025

ಕಾಂಗ್ರೆಸ್​ನಲ್ಲಿ ಯಾವುದೇ ಅಸಮಾಧಾನ ಇಲ್ಲ: ಡಿ‌.ಕೆ.ಶಿವಕುಮಾರ್

ಹುಬ್ಬಳ್ಳಿ : ನಾವೆಲ್ಲರೂ ಒಟ್ಟಿಗಿದ್ದೇವೆ ಕಾಂಗ್ರೆಸ್​ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ  ಡಿಕೆ ಶಿವಕುಮಾರ್ ನಮ್ಮ ಪಕ್ಷದಲ್ಲಿ ಅಸಮಾಧಾನ ಎಲ್ಲಿದೆ..? ಆದರೆ ಅಸಮಾಧನವಿರುವುದು ಬಿಜೆಪಿ ಪಕ್ಷದಲ್ಲಿ ಅವರಲ್ಲಿ ಅಸಮಾಧಾವವಿರುವುದರಿಂದಲೇ ಇದುವರೆಗೂ ವಿರೋಧ ಪಕ್ಷದ ನಾಯಕನ  ಆಯ್ಕೆಯಾಗಿಲ್ಲ ಎಂದರು

ಇನ್ನೂ ಮೂರ್ನಾಲ್ಕು ದಿನದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ.ಈಗಲೇ ಎಲ್ಲಾ  ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಶೇ.75 ಕ್ಷೇತ್ರಗಳಿಗೆ ಸಚಿವರು  ಹೋಗಿ ಸ್ಥಳೀಯ ಶಾಸಕರು, ಕಾರ್ಯಕರ್ತರನ್ನ ಭೇಟಿ ಮಾಡಿ ಬಂದಿದ್ದಾರೆ. ಅವರೆಲ್ಲರೂ ವರದಿಯನ್ನು ಈಗಲೇ ಸಲ್ಲಿಸಿಬೇಕಿತ್ತು.  ಆದರೆ ಕಾರಣಾಂತರಗಳಿಂದ ತಡವಾಗಿದೆ.

 ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ್ದು ಸತ್ಯ ಅಂತಾ ನಾನು ಜಡ್ಜ್ ಮಾಡೋಕೆ ಆಗುತ್ತಾ? : ಸಚಿವ ಡಾ.ಜಿ. ಪರಮೇಶ್ವರ್

ಲೋಕಸಭಾ ಚುನಾವಣೆಗೆ ದೆಹಲಿಯ ವರಿಷ್ಠರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಹೊಸ ಮುಖ, ವಾಕ್ಚಾತುರ್ಯ , ಯುವಗಕರು ಸೇರಿ ಹಲವು ಮಾನದಂಡಗಳನ್ನ ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲಿದ್ದೇವೆ. ಈ ನಿಟ್ಟಿನನಲ್ಲಿ ವರದಿ ಸಿದ್ದವಾಗುತ್ತಿದೆ ಎಂದರು.

 

 

 

 

 

 

 

 

 

 

 

 

 

 

 

 

RELATED ARTICLES

Related Articles

TRENDING ARTICLES