Sunday, December 22, 2024

RTO ಕಚೇರಿಗೆ ಶಾಸಕ ಭರತ್ ರೆಡ್ಡಿ ಧಿಡೀರ್ ಭೇಟಿ

ಬಳ್ಳಾರಿ: ಭ್ರಷ್ಟಾಚಾರದ ಅಡ್ಡವಾಗಿರುವ ಬಳ್ಳಾರಿ ಆರ್​ಟಿಓ ಕಚೇರಿ(RTO Office)ಗೆ ನಗರ ಶಾಸಕ ಭರತ್ ರೆಡ್ಡಿ ಧಿಡೀರ್ ಭೇಟಿ ನಿಡಿದ್ದಾರೆ.

ಆರ್​ಟಿಓ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಹಿನ್ನೆಲೆ ಇಂದು ಕಚೇರಿಗೆ ತೆರಳಿದ್ದಾರೆ. ಆರ್​ಟಿಓ ಶೇಖರಪ್ಪ ಮತ್ತು ಆರ್​ಟಿಓ ಇನ್ಸ್ಪೆಕ್ಟರ್ ನಾಗೇಶ್​ ಎಂಬುವರನ್ನು ವಿಚಾರಣೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

 ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲೇ ಇಂಥ ನಾಡ ದ್ರೋಹಿ ಸಿಎಂರನ್ನ ಕಂಡಿರಲಿಲ್ಲ : ಬಿಜೆಪಿ ಆಕ್ರೋಶ

ಆರ್​ಟಿಓ ಕಚೇರಿಯಲ್ಲಿ ಇನ್ನೂ ಮುಂದಿ ದಲ್ಲಾಳಿಗಳ ಹಾವಳಿ ತಪ್ಪಿಸದಿದ್ದರೆ ನಿಮ್ಮನ್ನು ವರ್ಗಾವಣೆ ಮಾಡಿಸುವೆ ಎಂದು ಖಡಕ್​ ವಾರ್ನಿಂಗ್ ನೀಡಿದರು.

ಹಣವಿಲ್ಲದೇ ಕೆಲಸ ಆಗಬೇಕು 

ಯಾರೇ ಬಂದರೂ ಕೂಡ ಹಣವಿಲ್ಲದೆ ಕೆಲಸವನ್ನ ಮಾಡಿಕೊಂಡಬೇಕು. ಒಂದು ವೇಳೆ ಅದೇ ಕೆಲಸ ಮತ್ತೊಮ್ಮೆ ಮಾಡಿದ್ರೇ ಸಸ್ಪಂಡ್ ಮಾಡುವೆ ಎಂದರು.

ಜನ ದಲ್ಲಾಳಿಗಳ ಹಾವಳಿಗೆ ಬೇಸತ್ತಿದ್ದ ಜನರು 

ದಲ್ಲಾಳಿಗಳ ಹಾವಳಿಗೆ ಬೇಸತ್ತಿದ್ದ ಜನರು ಶಾಸಕರೆದುರು ಆರ್​ಟಿಓ ಕಚೇರಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದಿದ್ದಾರೆ.

ಭರತ್ ರೆಡ್ಡಿ ಸಾರ್ವಜನಿಕರಿಗೆ ಭರವಸೆ

ಇನ್ಮುಂದೆ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯದಂತೆ ಮಾಡುವೆ ಎಂದು ಭರತ್ ರೆಡ್ಡಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ರಾಜಕೀಯ ಮಾಡುವುದಕ್ಕೆ ಕಚೇರಿಗೆ ಬರಬೇಡಿ

ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿಯವರ ನೂತನ ಪಕ್ಷದಿಂದ ನಿಲ್ಲಲು ಆರ್​ಟಿಓ ಇನ್ಸ್ಪೆಕ್ಟರ್ ನಾಗೇಶ್ ಮುಂದಾಗಿದ್ದರು. ಆದರೆ, ಕೊನೆ ಹಂತದಲ್ಲಿ ಆಗಿರಲಿಲ್ಲ. ಇದೀಗ ಅದನ್ನೆ ಹಿಡಿದುಕೊಂಡ ಶಾಸಕ ಭರತ್ ರೆಡ್ಡಿ  ಅವರು ‘ಚುನಾವಣೆ ನಿಲ್ಲೋದಿದ್ರೇ ರಾಜೀನಾಮೆ ನೀಡಿ.. ಮರ್ಯಾದೆಯಿಂದ ಕೆಲಸ ಮಾಡಿ ಇಲ್ಲವಾದ್ರೇ ಸರಿಯಿರಲ್ಲ ಎಂದು ನೇರವಾಗಿ ವಾರ್ನಿಂಗ್ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES