Monday, December 23, 2024

5 ವರ್ಷಗಳಲ್ಲಿ ಕಾಂಗ್ರೆಸ್ಸಿಗರ ಮನೆ, ಬಂಗಲೆ, ಕಾರು ಎಲ್ಲವೂ ಅಭಿವೃದ್ಧಿ ಕಂಡಿವೆ : ಪ್ರಧಾನಿ ಮೋದಿ

ಛತ್ತೀಸ್‌ಗಢ : 5 ವರ್ಷಗಳ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ನೀವೆಲ್ಲರೂ ನೋಡಿದ್ದೀರಿ. ಈ 5 ವರ್ಷಗಳಲ್ಲಿ ಕಾಂಗ್ರೆಸ್ ನಾಯಕರ ಮನೆ, ಬಂಗಲೆ, ಕಾರು, ಇವೆಲ್ಲವೂ ಅಭಿವೃದ್ಧಿ ಕಂಡಿವೆ. ಈ 5 ವರ್ಷಗಳಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಮತ್ತು ಅವರ ಸಂಬಂಧಿಕರು ಮಾತ್ರ ಲಾಭ ಪಡೆದರು ಎಂದು ಕಾಂಗ್ರೆಸ್​ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ನಕ್ಸಲೀಯರ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಛತ್ತೀಸ್‌ಗಢದ ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡುವಲ್ಲಿ ಕಾಂಗ್ರೆಸ್ ಪಕ್ಷ ಹೊಸ ದಾಖಲೆ ನಿರ್ಮಿಸಿದೆ. ಕಾಂಗ್ರೆಸ್ ಛತ್ತೀಸ್‌ಗಢದ ಜನರಿಗೆ ಹದಗೆಟ್ಟ ರಸ್ತೆಗಳು ಮತ್ತು ಕಳಪೆ ಸ್ಥಿತಿಯಲ್ಲಿರುವ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನೀಡಿತು ಎಂದು ಕಿಡಿಕಾರಿದರು.

ಜನರನ್ನು ಲೂಟಿ ಮಾಡುತ್ತಿದೆ

ಕಾಂಗ್ರೆಸ್ ಯಾವತ್ತೂ ಸದುದ್ದೇಶದಿಂದ ಕೆಲಸ ಮಾಡಲು ಸಾಧ್ಯವಿಲ್ಲ. 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಲಕ್ಷ ಕೋಟಿ ಹಗರಣ ಮಾಡಿ ಕಪ್ಪುಹಣದಿಂದ ತನ್ನ ಬೊಕ್ಕಸ ತುಂಬಿಸಿಕೊಂಡಿತ್ತು. ಕಳೆದ 10 ವರ್ಷದಿಂದ ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿಲ್ಲ. ಹೀಗಿರುವಾಗ ಕಾಂಗ್ರೆಸ್‌ನ ಬೊಕ್ಕಸ ಬರಿದಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಕಾಂಗ್ರೆಸ್ ಅಲ್ಲಿನ ಜನರನ್ನು ಲೂಟಿ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಆಣೆ ಮಾಡಿ ಸುಳ್ಳು ಘೋಷಣೆ

ಗಂಗಾ ಜೀ ಮೇಲೆ ಆಣೆ ಮಾಡಿ ಸುಳ್ಳು ಘೋಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾತ್ರ ಮಾಡಬಲ್ಲರು. 9 ವರ್ಷಗಳ ಹಿಂದೆ ಅಸಾಧ್ಯ ಎನಿಸಿದ್ದ ಕಾರ್ಯಗಳನ್ನು ಮೋದಿ ಭರವಸೆ ನೀಡಿದ್ದರಿಂದ ಪೂರ್ಣಗೊಳಿಸಿದ್ದೇವೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನೂ ಮೋದಿ ಖಾತ್ರಿಪಡಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

RELATED ARTICLES

Related Articles

TRENDING ARTICLES