ಗದಗ: ಕರ್ನಾಟಕ ರಾಜ್ಯ ನಾಮಕರಣಕ್ಕೆ 50ರ ಸಂಭ್ರಮದ ಹಿನ್ನಲೆ ಗದಗ (Gadag)ನಗರದಲ್ಲಿ ಅದ್ಧೂರಿ ಕನ್ನಡ ಹಬ್ಬ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸುವಾಗ ಗಣ್ಯರ ಹೆಸರನ್ನು ಪ್ರಸ್ತಾಪಿಸಿದರು ಆದ್ರೆ ಈ ವೇಳೆ ಡಿ.ಕೆ.ಶಿವಕುಮಾರ್ ಹೆಸರನ್ನೇ ಮರೆತಿದ್ದಾರೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಷಣ ಆರಂಭಿಸಿವಾಗ ಹೆಸರನ್ನು ಪ್ರಸ್ತಾಪಿಸಿದರು. ಆದ್ರೆ ಈ ವೇಳೆ ಡಿ.ಕೆ.ಶಿವಕುಮಾರ್ ಹೆಸರನ್ನೇ ಮರೆತಿದ್ದರು. ಭೈರತಿ ಸುರೇಶ್ ಕೂಡಲೇ ಹೋಗಿ ನೆನಪಿಸಿದ ಬಳಿಕ ಡಿಕೆಶಿ ಅವರ ಹೆಸರನ್ನು ಹೇಳಿದ್ದಾರೆ. ಶಿವಕುಮಾರ್ ಹೆಸರು ಹೇಳುತ್ತಿದ್ದಂತೆ ಜನರು ಘೋಷಣೆ ಕೂಗಿದ್ದಾರೆ.
ಶಿವಕುಮಾರ್, ಸಿದ್ದರಾಮಯ್ಯ ನಡುವೆ ‘ಅಂತರ’
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹಲವು ಸಚಿವರು, ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ ಪಕ್ಕದಲ್ಲಿ ಶಿವಕುಮಾರ್ ಅನ್ಯಮನಸ್ಕರಂತೆ ನಿಂತಿದ್ದಾರೆ.
ಇದನ್ನೂ ಓದಿ: ಭಾಷಣ ವೇಳೆ ಡಿಸಿಎಂ ಡಿಕೆ ಹೆಸರನ್ನೇ ಮರೆತ ಸಿಎಂ ಸಿದ್ದರಾಮಯ್ಯ
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷವಾಗಿದೆ. ಹೀಗಾಗಿ ಕರ್ನಾಟಕ ಸಂಭ್ರಮ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.