Wednesday, January 22, 2025

ವೈದ್ಯರ ನಿರ್ಲಕ್ಷ್ಯ : ಸಾವು-ಬದುಕಿನ ಮಧ್ಯೆ ಪುಟ್ಟ ಕಂದಮ್ಮನ ನರಳಾಟ

ಬೆಂಗಳೂರು : ವೈದ್ಯರ ನಿರ್ಲಕ್ಷಕ್ಕೆ ಕಂದಮ್ಮ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಾರ್ಮಲ್​​​​​​ ಜ್ವರ ಅಂತ ಹೇಳಿ ಕಳೆದ ಅಕ್ಟೋಬರ್ 29ನೇ ತಾರಿಖು ಮಗುವನ್ನು ಪೋಷಕರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​​ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ಮಗುವಿಗೆ ಅವಧಿ ಮೀರಿದ (Expire)​​ ಡ್ರಿಪ್ಸ್ ನೀಡಿದ್ದಾರೆ.

ಇದರಿಂದ ಮಗುವಿನ ದೇಹಕ್ಕೆ ಡ್ರಿಪ್ಸ್​​​ ಹೋದ ಕೊಡಲೇ ಮಗುವಿನ ತುಟಿಯಲ್ಲಿ ಸ್ವೆಲ್ಲಿಂಗ್ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಔಟ್​ ಡೇಟ್ ಆಗಿರುವ ಔಷಧಿ ಕೊಟ್ಟಿರುವುದನ್ನ ಗಮನಿಸಿದ್ದಾರೆ. ತಕ್ಷಣವೇ ಮಗುವನ್ನ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಮಗುವಿಗೆ ಚಿಕಿತ್ಸೆ ಮುಂದುವರೆದಿದ್ದು, ಮಗು ಸಾವು-ಬದುಕಿನ ಮಧ್ಯೆ ಹೋರಾಡುವಂತಾಗಿದೆ. ಇನ್ನು ಸಂಜೀವಿನಿ ಆಸ್ಪತ್ರೆಯ ವಿರುದ್ದ ಪೋಷಕರು ದೂರು ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ನಮ್ಮ ಮಗುವಿನ ನರಳಾಟಕ್ಕೆ ಕಾರಣ ಎಂದು ಆರೋಪಿಸಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚುಚ್ಚು ಮದ್ದು ಕೊಟ್ಟಿರುವುದು ನಿಜ

ಈ ಕುರಿತು ಸಂಜೀವಿನಿ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯೆ ನೀಡಿದ್ದು, ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ಕೊಟ್ಟಿರುವುದು ನಿಜ. ಇದೆ ಡ್ರಿಪ್ಸ್ ಕೊಡಲಾಗಿದೆ. ಈ ಡ್ರಿಪ್ಸ್​ನಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ನಾವು ಕ್ಷಮೆ ಕೇಳುತ್ತೇವೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನುತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES