Sunday, January 5, 2025

ಅಫ್ಘಾನಿಸ್ತಾನಕ್ಕೆ 180 ರನ್​ಗಳ ಸುಲಭ ಗುರಿ ನೀಡಿದ ನೆದರ್ಲೆಂಡ್ಸ್

ಬೆಂಗಳೂರು : ವಿಶ್ವಕಪ್​ನಲ್ಲಿ ಇಂದು ನಡೆದ ಅಫ್ಘಾನಿಸ್ತಾನ ಹಾಗೂ ನೆದರ್ಲೆಂಡ್ಸ್ ನಡುವಿನ ಪಂದ್ಯದಲ್ಲಿ ಅಫ್ಘಾನ್ ಬೌಲರ್​ಗಳು ಮೇಲುಗೈ ಸಾಧಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್​ ಲೆಕ್ಕಾಚಾರವನ್ನು ಅಫ್ಘಾನ್ ಬೌಲರ್​ಗಳು ಉಲ್ಟಾ ಮಾಡಿದರು. ಪರಿಣಾಮ ನೆದರ್ಲೆಂಡ್ಸ್ 46.3 ಓವರ್​ಗಳಲ್ಲಿ 179 ರನ್​ಗಳಿಗೆ ಸರ್ವಪತನ ಕಂಡಿತು.

ನೆದರ್ಲೆಂಡ್ಸ್ ಪರ ಸಿಬ್ರಾಂಡ್ ಎಂಗೆಲ್​ಬ್ರೆಕ್ಟ್ ಆಕರ್ಷಕ ಅರ್ಧಶತಕ (58) ಸಿಡಿಸಿ ಮಿಂಚಿದರು. ಮ್ಯಾಕ್ಸ್​ ಒಡೌಡ್​ 42, ಕಾಲಿನ್ ಅಕರ್ಮನ್ 29 ರನ್​ ಗಳಿಸಿದರು. ಅಫ್ಘಾನಿಸ್ತಾನ ಪರ ನೂರ್ ಅಹ್ಮದ್ 2, ಮೊಹಮ್ಮದ್ ನಬಿ 2 ಹಾಗೂ ಮುಜೀಬ್ ಒಂದು ವಿಕೆಟ್ ಪಡೆದರು. ಉಳಿದಂತೆ ನೆದರ್ಲೆಂಡ್ಸ್​ನ ನಾಲ್ವರು ಬ್ಯಾಟರ್​ಗಳು ರನೌಟ್​ ಆದರು.

RELATED ARTICLES

Related Articles

TRENDING ARTICLES