Sunday, January 5, 2025

ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ : ಪಾಕ್ ಕೆಳಗೆ ತಳ್ಳಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಅಫ್ಘಾನ್

ಬೆಂಗಳೂರು : ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 8 ಅಂಕಗಳೊಂದಿಗೆ ಪಾಕಿಸ್ತಾನ ತಂಡವನ್ನು ಕೆಳಗೆ ತಳ್ಳಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಗೆಲುವು ಅಫ್ಘಾನ್ ಸೆಮಿಸ್​ ಆಸೆಯನ್ನ ಇನ್ನೂ ಜೀವಂತವಾಗಿಸಿದೆ.

ಲಕ್ನೋದಾ ಏಕನಾ ಮೈದಾನದಲ್ಲಿ ನಡೆದ ವಿಶ್ವಕಪ್​-2023 ಟೂರ್ನಿಯ 34ನೇ ಪಂದ್ಯದಲ್ಲಿ ಟಾಸ್​ ಗೆದ್ದ ನೆದರ್ಲೆಂಡ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಅಫ್ಘಾನ್ ಬೌಲರ್​ಗಳ ದಾಳಿಗೆ 179 ರನ್ ಗಳಿಸಿ ಆಲೌಟ್​ ಆಯಿತು.

180 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 31.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಅಫ್ಘಾನ್ ಪರ ನಾಯಕ ಹಶ್ಮತುಲ್ಲಾ ಶಾಹಿದಿ ಅಜೇಯ 56* ಹಾಗೂ ರಹಮತ್​ ಶಾ (52) ಆಕರ್ಷಕ ಅರ್ಧಶತಕ ಸಿಡಿಸಿದರು. ಒಮರ್ಜಾಯ್ ಅಜೇಯ 31* ಹಾಗೂ ಇಬ್ರಾಹಿಂ ಜದ್ರಾನ್ 20 ರನ್​ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ಪರ ಸಿಬ್ರಾಂಡ್ ಎಂಗೆಲ್​ಬ್ರೆಕ್ಟ್ ಅರ್ಧಶತಕ (58) ಸಿಡಿಸಿ ತಂಡಕ್ಕೆ ಆಸರೆಯಾದರು. ಮ್ಯಾಕ್ಸ್​ ಒಡೌಡ್​ 42, ಕಾಲಿನ್ ಅಕರ್ಮನ್ 29 ರನ್​ ಗಳಿಸಿದರು. ಅಫ್ಘಾನಿಸ್ತಾನ ಪರ ನೂರ್ ಅಹ್ಮದ್ 2 ಹಾಗೂ ಮೊಹಮ್ಮದ್ ನಬಿ 2, ಮುಜೀಬ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES